ಆಂಧ್ರಪ್ರದೇಶ: ನೆರೆಯ ತೆಲುಗು ರಾಷ್ಟ್ರದಲ್ಲಿ ನವವಿವಾಹಿತನೊಬ್ಬ ತನ್ನ ಫಸ್ಟ್ ನೈಟ್ ಸಂಭ್ರಮಕ್ಕಾಗಿ ಮುದ್ರಿಸಿದ್ದ ಫ್ಲೆಕ್ಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು ನವವಿವಾಹಿತನೊಬ್ಬ ತನ್ನ ಫಸ್ಟ್ ನೈಟ್ ಸಂಭ್ರಮಕ್ಕಾಗಿ ಮುದ್ರಿಸಿದ್ದ ಫ್ಲೆಕ್ಸ್ ನಲ್ಲಿ, ‘ಮೊದಲ ರಾತ್ರಿಗಾಗಿ ಹಾತೊರೆಯುತ್ತಿದ್ದು, ನನ್ನ ಬ್ರಹ್ಮಚರ್ಯ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ರಾತ್ರಿಯ ಯುದ್ಧಕ್ಕೆ ಬಾಹುಬಲಿಯಂತೆ ಸಿದ್ಧನಾಗಿದ್ದೇನೆ. ಕಡಿಮೆ ಸಮಯದಲ್ಲಿ ನನ್ನ ಹೆತ್ತವರನ್ನು ಅಜ್ಜ-ಅಜ್ಜಿಯನ್ನಾಗಿ ಮಾಡುವೆನೆಂದು ಪ್ರಾಮಾಣಿಕತೆಯಿಂದ ಪ್ರತಿಜ್ಞೆ ಮಾಡುತ್ತೇನೆ’ ಎಂದು ಬರೆದುಕೊಂಡಿದ್ದಾನೆ.
ಸದ್ಯ ಈ ಪ್ಲೆಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಈ ಪ್ಲೆಕ್ಸ್ ನೋಡಿ ನೆಟ್ಟಿಗರು ‘ರಾವಲ್ಪಿಂಡಿ ಫಸ್ಟ್ ನೈಟ್ ಸೆಲೆಬ್ರೇಷನ್’ ಇತ್ಯಾದಿ ಹೆಸರಿನಲ್ಲಿ ಹಂಚಿಕೊಳ್ಳುತ್ತಿದ್ದಾರೆ.