Cyclone Fengal : ಫೆಂಗಲ್ ಚಂಡಮಾರುತ ರಾಜ್ಯದಲ್ಲೂ ಮುಂದುವರೆದಿದ್ದು, ರಾಜ್ಯದ ಹಲವೆಡೆ ಮುಂದಿನ ಮೂರೂ ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ ರಾಜ್ಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ.
ಹೌದು, ದಕ್ಷಿಣ ಕನ್ನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ.
Cyclone Fengal ; ಕುಸಿಯುವ ಹಂತಕ್ಕೆ ಬಂದ ತಾತ್ಕಾಲಿಕ ಸೇತುವೆ
ಫೆಂಗಲ್ ಚಂಡಮಾರುತ ಎಫೆಕ್ಟ್ ನಿಂದ ಮಂಚನಬೆಲೆ ಡ್ಯಾಂನ ಸಮೀಪ ಇರುವ ತಾತ್ಕಾಲಿಕ ಸೇತುವೆ ಮತ್ತೆ ಕುಸಿಯುವ ಹಂತಕ್ಕೆ ಬಂದದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಡ್ಯಾಂ ಸೇತುವೆ ತಿಂಗಳ ಹಿಂದೆಯೇ ಬಂದಿದ್ದ ಮಳೆಗೆ ಕೊಚ್ಚಿ ಹೋಗಿತ್ತು. ಬಳಿಕ ಕೊಚ್ಚಿ ಹೋಗಿದ್ದ ಸೇತುವೆಗೆ ಅಧಿಕಾರಿಗಳು ತೇಪೆಹಾಕಿದ್ದರು. ಈಗ ನಿರಂತರ ಮಳೆಗೆ ಮತ್ತೆ ತಾತ್ಕಾಲಿಕ ಸೇತುವೆಯಲ್ಲಿ ಬಿರುಕು ಬಿತ್ತಿದ್ದು, ಶಾಶ್ವತ ಸೇತುವೆ ನಿರ್ಮಿಸುವಂತೆ ಒತ್ತಾಯಿಸಲಾಗಿದೆ.
ಫೆಂಗಲ್ ಎಫೆಕ್ಟ್ ಮೈಸೂರಿನಲ್ಲಿ ನಿರಂತರ ಮಳೆ
ಫೆಂಗಲ್ ಚಂಡಮಾರುತದ ಪ್ರಭಾವದಿಂದ ಮೈಸೂರಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಚಾಮುಂಡಿ ಬೆಟ್ಟದ ಮುಖ್ಯ ರಸ್ತೆಗೆ ಬಂಡೆ ಉರುಲಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಇನ್ನು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಫೆಂಗಲ್ ಅಬ್ಬರ ಮುಂದುವರೆದಿದ್ದು, ಬಜಪೆ ಸಮೀಪದ ಅದ್ಯಪಾಡಿಯಲ್ಲಿ ಭೂಕುಸಿತವಾಗಿದ್ದು, ಬಜಪೆ – ಅದ್ಯಪಾಡಿ ಸಂಪರ್ಕ ಕಡಿತವಾಗಿದೆ.