ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಲಾಭ ಪಡೆಯಲು ಫಲಾನುಭವಿಗಳು ನಾಳೆಯೊಳಗೆ EKYC ಪ್ರಕ್ರಿಯೆ ಪೂರ್ಣಗೊಳಿಸಬೇಕು. ಸರ್ಕಾರ ಈಗಾಗಲೇ ಈ ಪ್ರಕ್ರಿಯೆಗೆ ಫೆಬ್ರವರಿ 10ನ್ನು ಲಾಸ್ಟ್ ಡೇಟ್ ಆಗಿ ಮಾಡಿದ್ದು, ಅದರ ವಿಸ್ತರಣೆ ಇಲ್ಲ ಎನ್ನಲಾಗಿದೆ.
ಹೌದು, ಮುಂದಿನ ಕಂತಿನ ಹಣ ವರ್ಗಾವಣೆಗಾಗಿ ಇ-ಕೆವೈಸಿ, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಲಿಂಕ್ ಮಾಡದ ಫಲಾನುಭವಿಗಳು ಫೆ.10 ರೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಯೋಜನೆಯ ರಾಜ್ಯ ನೋಡಲ್ ಅಧಿಕಾರಿ ಮೇಘರಾಜ್ ಸಿಂಗ್ ಹೇಳಿದ್ದಾರೆ.
ಇದಕ್ಕಾಗಿ ವೆಬ್‌ಸೈಟ್‌ಗೆ ಹೋಗಿ KYC ಅನ್ನು ಪೂರ್ಣಗೊಳಿಸಬಹುದು. ಹತ್ತಿರದ ಸೇವಾ ಕೇಂದ್ರದಲ್ಲೂ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಪಿಎಂ ಕಿಸಾನ್ ವೆಬ್‌ಸೈಟ್ ಮೂಲಕ ಕೆವೈಸಿ ಮಾಡಲು ಬಯಸಿದರೆ, ಆಧಾರ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಿದೆ.




