ಜೈಪುರ: ಕೊರೋನಾ ನಂತರ ಇದೀಗ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಗೆಗಳಲ್ಲಿ ಹಕ್ಕಿ ಜ್ವರದ ವೈರಸ್ ದೃಢಪಟ್ಟಿದೆ. ಮದ್ಯ ಪ್ರದೇಶದ ಇಂದೋರ್ ನಲ್ಲಿ 96 ಕಾಗೆಗಳು ಸಾವನ್ನಪ್ಪಿದ್ದು, ಆ ಸ್ಥಳಕ್ಕೆ ಜನರು ಹೋಗಬಾರದು ಎಂದು ಸೂಚಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ಹಕ್ಕಿ ಜ್ವರದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.
ಈ ಮೂಲಕ ದೇಶದಲ್ಲಿ ಕೊರೋನಾ, ಬ್ರಿಟನ್ ವೈರಸ್ ಭೀತಿಯ ನಡುವೆಯೂ ಹಕ್ಕಿ ಜ್ವರದ ಭೀತಿ ಶುರುವಾಗಿದೆ. ಈ ಕುರಿತು ರಾಜಸ್ಥಾನದ ಪ್ರಧಾನ ಕಾರ್ಯದರ್ಶಿ ಕುಂಜಿ ಲಾಲ್ ಮೀನಾ ಅವರು ಮಾತನಾಡಿ, ಇದುವರೆಗೆ ರಾಜಸ್ತಾನದಲ್ಲಿ 219 ಕಾಗೆಗಳು ಮೃತಪಟ್ಟಿದ್ದು, ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಹರಪನಹಳ್ಳಿ: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ
ಇದನ್ನು ಓದಿ: ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಬಳಕೆಗೆ ಗ್ರೀನ್ ಸಿಗ್ನಲ್