ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ರಾಜಿ ಸಂಧಾನಗಳೂ ಫಲ ನೀಡಿಲ್ಲ. ಇನ್ನು ರೈತರು ದೆಹಲಿ ಗಡಿಯನ್ನು ಪ್ರವೇಶ ಮಾಡದಂತೆ ಸರ್ಕಾರ ಕಠಿಣ ರಕ್ಷಣಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ಈ ಬಗ್ಗೆ ನೀಲಿ ಚಿತ್ರ ತಾರೆ ಮಿಯಾ ಖಲೀಫಾ ಪ್ರತಿಕ್ರಿಯೆ ನೀಡಿದ್ದಾರೆ. ‘ಮಾನವ ಹಕ್ಕುಗಳ ಉಲ್ಲಂಘನೆ ಮಿತಿ ಮೀರಿ ಸಾಗುತ್ತಿದೆ. ದೆಹಲಿಯ ಸುತ್ತ ಇಂಟರ್‌ನೆಟ್ ಸ್ಥಗಿತ ಮಾಡಲಾಗಿದೆ ಎಂದರೆ ಏನು?’ ಎಂದು ಪ್ರಶ್ನಿಸಿದ್ದಾರೆ.
What in the human rights violations is going on?! They cut the internet around New Delhi?! #FarmersProtest pic.twitter.com/a5ml1P2ikU
— Mia K. (Adri Stan Account) (@miakhalifa) February 3, 2021
ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ; ಸ್ವೀಡನ್ ಪರಿಸರವಾದಿ ಗ್ರೇಟಾ ತನ್‌ಬರ್ಗ್ ಬೆಂಬಲ
ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕ ರಾಜಕೀಯ ನಾಯಕರು, ಸಿನಿಮಾ ತಾರೆಯರು, ಪರಿಸರವಾದಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ಯುವ ಪರಿಸರವಾದಿ ಸ್ವೀಡನ್ನಿನ ಗ್ರೇಟಾ ತನ್‌ಬರ್ಗ್ ಈ ಸಾಲಿಗೆ ಸೇರಿದ್ದು, ಕಾಯ್ದೆಯ ವಿರುದ್ಧ ದನಿ ಎತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಗ್ರೇಟಾ, ‘ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತದಲ್ಲಿ ರೈತರು ನಡೆಸುತ್ತಿರುವ ಒಗ್ಗಟ್ಟಿನ ಪ್ರತಿಭಟನೆಗೆ ನನ್ನ ಬೆಂಬಲವಿದೆ’ ಎಂದಿದ್ದಾರೆ.
We stand in solidarity with the #FarmersProtest in India.
https://t.co/tqvR0oHgo0— Greta Thunberg (@GretaThunberg) February 2, 2021