ರೈತರ ಬ್ಯಾಂಕ್ ಖಾತೆಗಳಿಗೆ ಮತ್ತೆ ಹಣವನ್ನು ಜಮಾ ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಹೌದು,ಮೋದಿ ಸರ್ಕಾರ ಮತ್ತೊಮ್ಮೆ ಪಿಎಂ ಕಿಸಾನ್ ಯೋಜನೆಯಡಿ ಅನ್ನದಾತರ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಜಮಾ ಮಾಡಲಿದ್ದು, ಇದರಿಂದ ಅನೇಕ ರೈತರಿಗೆ ಅನುಕೂಲವಾಗಲಿದೆ.
ಮೋದಿ ಸರ್ಕಾರ ಈಗಾಗಲೇ 8 ಕಂತುಗಳಲ್ಲಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿದೆ. ಈಗ 9 ನೇ ಕಂತಿನ ಹಣ ಬಾಕಿ ಇದೆ. ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಒಂಬತ್ತನೇ ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಆಗಸ್ಟ್ನಲ್ಲಿ ಜಮಾ ಮಾಡಲಿದೆ ಎನ್ನಲಾಗಿದೆ.
ಮೋದಿ ಸರ್ಕಾರ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ 6,000 ರೂ. ನೀಡುತ್ತದೆ. ಆದರೆ, ಈ ಹಣವು ಒಂದೇ ಬಾರಿಗೆ ಬರುವುದಿಲ್ಲ. ಈ ಹಣ ತಲಾ 2 ಸಾವಿರ ರೂ.ಗಳನ್ನು ಮೂರು ಕಂತುಗಳಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ನೀವು ಇನ್ನೂ ಯೋಜನೆಗೆ ಸೇರದಿದ್ದರೆ, ಪಿಎಂ ಕಿಸಾನ್ ಯೋಜನೆ ವೆಬ್‌ಸೈಟ್ ಮೂಲಕ ಸೇರಬಹುದು.