ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟರ್ ಆ್ಯರನ್ ಪಿಂಚ್ ಏಕದಿನ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ ಪಡೆದಿದ್ದು, ಈ ಕುರಿತಂತೆ ಕ್ರಿಕೆಟ್ ಆಸ್ಟ್ರೇಲಿಯಾ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
ಫಿಂಚ್ ತಮ್ಮ 146ನೇ ಅಂತಿಮ ಏಕದಿನ ಪಂದ್ಯವನ್ನು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದ್ದಾರೆ. ಆ ಬಳಿಕ ಅವರು ಅಂತಾರಾಷ್ಟ್ರೀಯ ಏಕದಿನದಿಂದ ಹೊರಗುಳಿಯಲಿದ್ದಾರೆ. ಫಿಂಚ್ ಏಕದಿನ ವೃತ್ತಿ ಜೀವನದಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 2015ರ ವಿಶ್ವಕಪ್ ವಿಜೇತ ತಂಡದಲ್ಲಿ ಇವರು ಆಡಿದ್ದರು.
ಇನ್ನು, ಆ್ಯರನ್ ಪಿಂಚ್ ಅವರು ಇಲ್ಲಿಯವರೆಗೂ 145 ಏಕದಿನ ಪಂದ್ಯಗಳನಾಡಿದ್ದು, 39.14 ಸರಾಸರಿಯಲ್ಲಿ 5401 ರನ್ ಗಳಿಸಿದ್ದು, ಇದರಲ್ಲಿ, 17 ಶತಕ, 30 ಅರ್ಧ ಶತಕ ಗಳಿಸಿದ್ದಾರೆ.