ಹೆಸರಾಂತ ನಟಿ, ಸಂಸದೆ ಮಿಮಿ ಚಕ್ರವರ್ತಿ ಮೇಲೆ ನಡುರಸ್ತೆಯಲ್ಲಿಯೇ ಲೈಂಗಿಕ ಕಿರುಕುಳ!

ಕಲ್ಕತ್ತ: ಪ್ರಮುಖ ಬಂಗಾಳಿ ನಟಿ, ಸಂಸದೆ ಮಿಮಿ ಚಕ್ರವರ್ತಿ ಅವರು ನಡು ರಸ್ತೆಯಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆ ನಡೆದಿದೆ.  ಮಿಮಿ ಚಕ್ರವರ್ತಿ ಅವರು ಸೋಮವಾರ ಸಂಜೆ  ಕೋಲ್ಕತ್ತಾದ ಗರಿಯಾಹತ್‌ನಿಂದ ಬಲಿಗಂಜ್‌ಗೆ ತೆರಳುತ್ತಿದ್ದಾಗ ಮಧ್ಯದಲ್ಲಿ…

ಕಲ್ಕತ್ತ: ಪ್ರಮುಖ ಬಂಗಾಳಿ ನಟಿ, ಸಂಸದೆ ಮಿಮಿ ಚಕ್ರವರ್ತಿ ಅವರು ನಡು ರಸ್ತೆಯಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆ ನಡೆದಿದೆ.  ಮಿಮಿ ಚಕ್ರವರ್ತಿ ಅವರು ಸೋಮವಾರ ಸಂಜೆ  ಕೋಲ್ಕತ್ತಾದ ಗರಿಯಾಹತ್‌ನಿಂದ ಬಲಿಗಂಜ್‌ಗೆ ತೆರಳುತ್ತಿದ್ದಾಗ ಮಧ್ಯದಲ್ಲಿ ಟ್ರಾಫಿಕ್ ಸಿಗ್ನಲ್‌ನಲ್ಲಿ ತನ್ನ ಕಾರು ನಿಂತಿತ್ತು. ಈ ಸಂದರ್ಭದಲ್ಲಿ, ಟ್ಯಾಕ್ಸಿ ಡ್ರೈವರ್ ಒಬ್ಬ ಮಿಮಿ ಚಕ್ರವರ್ತಿ ಅವರನ್ನು ಕಾಮದ ದೃಷ್ಟಿಯಲ್ಲಿ ನೋಡಿದ್ದಾನೆ. ಅಷ್ಟೇ ಅಲ್ಲದೆ ಟ್ಯಾಕ್ಸಿ ಡ್ರೈವರ್,  ನಟಿ ಮಿಮಿ ಚಕ್ರವರ್ತಿ ಅವರನ್ನು  ನೋಡುತ್ತಾ ಅಸಭ್ಯವಾಗಿ ವರ್ತಿಸಿ ಅವಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಇದರಿಂದ ಮಿಮಿ ಚಕ್ರವರ್ತಿ ಗಾಬರಿಯಾಗಿ ಕಾರಿನಿಂದ ಇಳಿದು ಟ್ಯಾಕ್ಸಿ ಡ್ರೈವರ್ ಹಿಡಿಯಲು ಪ್ರಯತ್ನಿಸಿದರೂ ಟ್ಯಾಕ್ಸಿ ಡ್ರೈವರ್ ಪರಾರಿಯಾಗಿದ್ದಾನೆ. ನಂತರ ಮಿಮಿ ಚಕ್ರವರ್ತಿ ಅವರು ಟ್ಯಾಕ್ಸಿ ಸಂಖ್ಯೆಯ ಆಧಾರದ ಮೇಲೆ ಸ್ಥಳೀಯ ರಿಯಾಹತ್‌ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಪ್ರವೇಶಿಸಿ ಟ್ಯಾಕ್ಸಿ ಸಂಖ್ಯೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಟ್ಯಾಕ್ಸಿ ಚಾಲಕನನ್ನು ಬಂಧಿಸಿದ್ದಾರೆ. ಲೈಂಗಿಕ ಕಿರುಕುಳ ತಡೆ ಕಾಯ್ದೆಯಡಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಅವರು ಬಂಗಾಳಿ ಸಿನಿಮಾ ರಂಗದಲ್ಲಿ ಉತ್ತಮ ಫಾಲೋಯಿಂಗ್ ಹೊಂದಿದ್ದಾರೆ. ಮಿಮಿ ಚಕ್ರವರ್ತಿ, ತನ್ನ ಸೌಂದರ್ಯ ಮತ್ತು ಮಾದಕ ಕಣ್ಣುಗಳೊಂದಿಗೆ ಪರದೆಯ ಮೇಲೆ ಕಾಣಿಸಿಕೊಂಡಾಗ ಅಭಿಮಾನಿಗಳಿಗೆ ಒಂದು ಹಬ್ಬವಾಗಿರುತ್ತಿತ್ತು. ಆದ್ದರಿಂದ ಬಂಗಾಳಿ ಜನರು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಜಾದವ್ಪುರ್ ಕ್ಷೇತ್ರದ ಸಂಸದರಾಗಿ ಮಿಮಿ ಚಕ್ರವರ್ತಿ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸಿದ್ದರು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.