Muda Scam : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಮುಡಾ ಹಗರಣದಲ್ಲಿ (Muda Scam) ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಹೌದು, ಮುಡಾ ಹಗರಣದಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ದೇವನೂರು ಹೊಸ ಬಡಾವಣೆಯ ಮೂಲ ದಾಖಲೆಯೇ ನಾಪತ್ತೆಯಾಗಿದೆ. ಅಂದರೆ ಹೊಸ ಬಡಾವಣೆಯ ಮೂಲ ನಕ್ಷೆಯ ದಾಖಲೆ ಮುಡಾದಲ್ಲಿ ಇಲ್ಲ. ಜೊತೆಗೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಮೂಲ ಅರ್ಜಿಯೂ ನಾಪತ್ತೆಯಾಗಿದೆ.
ಅಷ್ಟೇ ಅಲ್ಲ, ಭೂ ಮಾಲೀಕ ದೇವರಾಜು ಜಮೀನು ನೋಟಿಫೈ ಕಡತ ಸಹ ನಾಪತ್ತೆಯಾಗಿದ್ದು, ಆರ್‌ಟಿಐ ಕಾರ್ಯಕರ್ತ ಗಂಗರಾಜು ಅರ್ಜಿಯಿಂದ ಇದು ಬಹಿರಂಗವಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment