ಬೆಂಗಳೂರು: ರಾಜ್ಯದಲ್ಲಿ ಇಂದು ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಗೆ 6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪರೀಕ್ಷೆಯಲ್ಲಿ ಹಿನ್ನಡೆಯಾದವರು ನಿರಾಶರಾಗಬಾರದು. ಪರೀಕ್ಷೆ, ಫಲಿತಾಂಶವೇ ಅಂತಿಮವಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್, ಪರೀಕ್ಷೆಯಲ್ಲಿ ಹಿನ್ನಡೆಯಾದವರು ನಿರಾಶರಾಗಬಾರದು. ಪರೀಕ್ಷೆ, ಫಲಿತಾಂಶವೇ ಅಂತಿಮವಲ್ಲ. ಎಲ್ಲವನ್ನು ಧೈರ್ಯವಾಗಿ ಎದುರಿಸುವ ಮಾನಸಿಕತೆಯನ್ನು ಹೊಂದಬೇಕು.
ಪರೀಕ್ಷೆ ಮತ್ತು ಫಲಿತಾಂಶ ಶೈಕ್ಷಣಿಕ ಜೀವನದ ಒಂದು ಭಾಗವಷ್ಟೇ. ಪೂರಕ ಪರೀಕ್ಷೆ ಬರೆಯುವ ಮೂಲಕ ಯಶಸ್ಸು ಸಾಧಿಸಿ ಶೈಕ್ಷಣಿಕ ಜೀವನ ಮುಂದುವರೆಸಬೇಕು. ಪರೀಕ್ಷೆ ಮೀರಿದ ಜೀವನವನ್ನು ಮರೆಯಬಾರದು ಎಂದು ಸಚಿವರು ಹೇಳಿದ್ದಾರೆ.
ಪರೀಕ್ಷೆಯಲ್ಲಿ ಹಿನ್ನಡೆಯಾದವರು ನಿರಾಶರಾಗಬಾರದು. ಪರೀಕ್ಷೆ, ಫಲಿತಾಂಶವೇ ಅಂತಿಮವಲ್ಲ. ಎಲ್ಲವನ್ನು ಧೈರ್ಯವಾಗಿ ಎದುರಿಸುವ ಮಾನಸಿಕತೆಯನ್ನು ಹೊಂದಬೇಕು.
ಪರೀಕ್ಷೆ ಮತ್ತು ಫಲಿತಾಂಶ ಶೈಕ್ಷಣಿಕ ಜೀವನದ ಒಂದು ಭಾಗವಷ್ಟೇ. ಪೂರಕ ಪರೀಕ್ಷೆ ಬರೆಯುವ ಮೂಲಕ ಯಶಸ್ಸು ಸಾಧಿಸಿ ಶೈಕ್ಷಣಿಕ ಜೀವನ ಮುಂದುವರೆಸಬೇಕು. ಪರೀಕ್ಷೆ ಮೀರಿದ ಜೀವನವನ್ನು ಮರೆಯಬಾರದು.
— B.C Nagesh (@BCNagesh_bjp) June 18, 2022




