ಗೆಲುವಿನ ಹತ್ತಿರ ಬಂದು ಸೋತ ಟೀಂ ಇಂಡಿಯಾ; ಇಂಗ್ಲೆಂಡ್ ಗೆ 17 ರನ್ ಗಳ ರೋಚಕ ಜಯ!

ಟಿ-20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತ ಇಂಗ್ಲೆಂಡ್‌ ಗೆಲುವು ಕಂಡಿದ್ದು, ಕ್ಲೀನ್‌ ಸ್ವೀಪ್‌ನಿಂದ ಪಾರಾಗಿದ್ದು, ಟಿ- 20 ಮೂರನೇ ಪಂದ್ಯದಲ್ಲಿ ಭಾರತ ರೋಚಕ ಸೋಲು ಕಂಡಿದ್ದು, ಕೊನೆಯ ಹಂತದಲ್ಲಿ ಕೇವಲ 17 ರನ್‌ಗಳ ಅಂತರದಿಂದ…

ಟಿ-20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತ ಇಂಗ್ಲೆಂಡ್‌ ಗೆಲುವು ಕಂಡಿದ್ದು, ಕ್ಲೀನ್‌ ಸ್ವೀಪ್‌ನಿಂದ ಪಾರಾಗಿದ್ದು, ಟಿ- 20 ಮೂರನೇ ಪಂದ್ಯದಲ್ಲಿ ಭಾರತ ರೋಚಕ ಸೋಲು ಕಂಡಿದ್ದು, ಕೊನೆಯ ಹಂತದಲ್ಲಿ ಕೇವಲ 17 ರನ್‌ಗಳ ಅಂತರದಿಂದ ಟೀಮ್ ಇಂಡಿಯಾ ರೋಚಕ ಸೋಲು ಕಂಡಿದೆ.

ಹೌದು, ಇಂಗ್ಲೆಂಡ್ ನೀಡಿದ 216 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ 9 ವಿಕೆಟ್‌ 198 ರನ್‌ ಗಳಿಸಿ 17 ರನ್‌ಗಳ ಅಂತರದಿಂದ ಸೋಲು ಕಂಡಿದೆ. ಟೀಮ್ ಇಂಡಿಯಾ ಸೂರ್ಯಕುಮಾರ್‌ ಯಾದವ್‌ ಗಳಿಸಿದ 117 ರನ್‌, ಶ್ರೇಯಸ್ ಅಯ್ಯರ್ 28 ರನ್ ಗಳಿಸಿದರು ಗಳಿಸಿದರು. ಇಂಗ್ಲೆಂಡ್‌ ಪರ ಟೋಪ್ಲೆ 3, ಡೇವಿಡ್‌ ವ್ಯಾಲಿ ಮತ್ತು ಕ್ರಿಸ್‌ ಜೋರ್ಡಾನ್‌ ತಲಾ 2, ಎಂ.ಅಲಿ ಮತ್ತು ಆರ್‌. ಗ್ಲಿಸನ್‌ ತಲಾ 1 ವಿಕೆಟ್‌ ಪಡೆದಿದ್ದಾರೆ.

ಉತ್ತಮ ಬೌಲಿಂಗ್ ಮಾಡಿ 3 ವಿಕೆಟ್ ಕಿತ್ತು ಇಂಗ್ಲೆಂಡ್ ತಂಡದ ಗೆಲುವಿಗೆ ಕಾರಣರಾದ ರೀಸ್ ಟಿಪ್ಲೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಇನ್ನು, ಸರಣಿಯೂದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.