7ನೇ ವೇತನ ಆಯೋಗದ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ ಸಿಕ್ಕಿದ್ದು, ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆ ನೀಡುವ ಮೊದಲು ದೊಡ್ಡ ಘೋಷಣೆ ಮಾಡಿದೆ.
ಹೌದು, ಪ್ರವಾಸ/ತರಬೇತಿ/ವರ್ಗಾವಣೆ/ನಿವೃತ್ತಿ ಸಮಯದಲ್ಲಿ ನೌಕರರಿಗೆ ತೇಜ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಲು ಅವಕಾಶ ನೀಡುವುದಾಗಿ ಸರ್ಕಾರ ಘೋಷಿಸಿದ್ದು, ನಿಮ್ಮ ಮನೆಯ ಯಾವುದೇ ಸದಸ್ಯರು ಸರ್ಕಾರಿ ನೌಕರರಾಗಿದ್ದರೆ, ನೀವು ಸಹ ಇದರ ಪ್ರಯೋಜನವನ್ನ ಪಡೆಯಬಹುದು.
7ನೇ ವೇತನ ಆಯೋಗವು ಸರ್ಕಾರಿ ನೌಕರರಿಗೆ ಸೆಪ್ಟೆಂಬರ್ 12ರಂದು ಹೊರಡಿಸಿದ ಕಚೇರಿ ಜ್ಞಾಪಕ ಪತ್ರದಲ್ಲಿ ಸರ್ಕಾರವು ತನ್ನ ಅನುಮೋದನೆಯನ್ನ ನೀಡಿದ್ದು, ಅದರಂತೆ ಉದ್ಯೋಗಿಗಳು ಈಗ ಪ್ರವಾಸ ಮಾಡಬಹುದಾಗಿದ್ದು, ಉದ್ಯೋಗಿಗಳಿಗೆ ಪ್ರಯಾಣಿಸಲು ಅವಕಾಶ ನೀಡಲು 2017ರಲ್ಲಿ ಕಚೇರಿ ಮೆಮೊರಾಂಡಮ್ ನಿರ್ಧಾರವನ್ನ ತೆಗೆದುಕೊಂಡಿದೆ.