ತುರ್ತು ಪರಿಸ್ಥಿತಿ ಹೇರಿ ಇಂದಿಗೆ 47 ವರ್ಷ: ತುರ್ತು ಪರಿಸ್ಥಿತಿ ಘೋಷಿಸಿದ್ದೇಕೆ ಇಂದಿರಾ ಗಾಂಧಿ?

ಜೂನ್ 25, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಇದನ್ನು ಕೇಳಿ ದೇಶಕ್ಕೆ ಅಕ್ಷರಶಃ ದಂಗು ಬಡಿದಿತ್ತು. ಇಂದಿರಾಗಾಂಧಿ ಅವರ ಲೋಕಸಭೆ ಸಿಂಧುತ್ವವನ್ನು ಅಸಿಂಧುಗೊಳಿಸಿ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದ್ದೇ…

ಜೂನ್ 25, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಇದನ್ನು ಕೇಳಿ ದೇಶಕ್ಕೆ ಅಕ್ಷರಶಃ ದಂಗು ಬಡಿದಿತ್ತು. ಇಂದಿರಾಗಾಂಧಿ ಅವರ ಲೋಕಸಭೆ ಸಿಂಧುತ್ವವನ್ನು ಅಸಿಂಧುಗೊಳಿಸಿ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದ್ದೇ ತುರ್ತು ಪರಿಸ್ಥಿತಿ ಹೇರಿಕೆಗೆ ಕಾರಣ.

ಆ ಸಮಯದಲ್ಲಿ ದೇಶದ ಜನರ ಆಕ್ರೋಶ ಎಷ್ಟಿತ್ತೆಂದರೆ 1977ರಲ್ಲಿ ಇಂದಿರಾ ತುರ್ತು ಪರಿಸ್ಥಿತಿ ವಾಪಾಸ್ ಪಡೆದರು. ಆದರೆ ಅದೇ ವರ್ಷ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸೋತು, ಮೊದಲ ಬಾರಿಗೆ ಜನತಾ ಪಕ್ಷ ಸರ್ಕಾರ ರಚಿಸಿತು.

ತುರ್ತು ಪರಿಸ್ಥಿತಿ ಘೋಷಿಸಿದ್ದೇಕೆ ಇಂದಿರಾ ಗಾಂಧಿ?

Vijayaprabha Mobile App free

1971ರ ಎಲೆಕ್ಷನ್‌‌ನಲ್ಲಿ ಇಂದಿರಾ ಗಾಂಧಿ ಎದುರು ರಾಯ್‌‌ಬರೇಲಿನಲ್ಲಿ ಜನತಾ ಪಾರ್ಟಿ ಅಭ್ಯರ್ಥಿ ರಾಜ ನಾರಾಯಣ್‌ ಸೋತಿದ್ದರು. ಆಗ ಅವರು ಇಂದಿರಾ ಗಾಂಧಿ ವಿರುದ್ಧ ಅಧಿಕಾರ ದುರುಪಯೋಗದಿಂದ ಜಯಗಳಿಸಿದ್ದಾರೆಂದು ಅಲಹಾಬಾದ್‌ ಹೈಕೋರ್ಟ್‌ ಮೊರೆಹೋಗಿದ್ದರು

4 ವರ್ಷ ವಿಚಾರಣೆ ನಡೆಸಿ ಬಳಿಕ, ಅಲಹಾಬಾದ್‌ ಹೈಕೋರ್ಟ್‌ ಪ್ರಧಾನಿ ಇಂದಿರಾ ಗಾಂಧಿಯ ಆಯ್ಕೆಯನ್ನ ರದ್ದು ಮಾಡಿತ್ತು. ಆಗ ಕಾಂಗ್ರೆಸ್ ವಿರುದ್ಧ ಬೃಹತ್ ಹೋರಾಟಕ್ಕೆ ಸಜ್ಜಾದ ವಿಪಕ್ಷಗಳನ್ನು ಕಟ್ಟಿ ಹಾಕಲು ಇಂದಿರಾ ಗಾಂಧಿ 1975 ಜೂನ್ 25 ರಂದು ಎಮರ್ಜೆನ್ಸಿ (ತುರ್ತು ಪರಿಸ್ಥಿತಿ) ಘೋಷಿಸಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.