ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಚುನಾವಣೆ ಮುಂದೂಡಬೇಕು ಎಂದು ಸರ್ಕಾರ & ರಾಜಕೀಯ ಪಕ್ಷಗಳು ಮನವಿಯನ್ನು ಸಲ್ಲಿಸಿದ್ದವು. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಚುನಾವಣೆಯನ್ನು ಮುಂದೂಡಬೇಕು ಮನವಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್‌ಗೆ ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ವಿಭಾಗೀಯ ಪೀಠಕ್ಕೆ” ರಾಜ್ಯದಲ್ಲಿ ಕರೋನ ಹೆಚ್ಚುತ್ತಿರುವ ಹಿನ್ನಲೆ ಚುನಾವಣೆ ಮುಂದೂಡಬೇಕು ಎಂದು ಬಿಜೆಪಿ & ಜೆಡಿಎಸ್ ಪಕ್ಷಗಳು ಮನವಿ ಸಲ್ಲಿಸಿವೆ. ಆದರೆ ಚುನಾವಣೆ ಮುಂದೂಡದಿರಲು ನಿರ್ಧರಿಸಲಾಗಿದೆ ಎಂದು ಚುನಾವಣೆ ಆಯೋಗದ ಪರ ವಕೀಲರು ವಿವರಣೆ ನೀಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ಸಿದ್ದಪಡಿಸಿದ್ದು, ಜಿಲ್ಲಾ ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆಗಳನ್ನು ಮುಂದಿನ ದಿನಗಳಲ್ಲಿ ನಡೆಸಬೇಕಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಚುನಾವಣೆ ಆಯೋಗದ ಪರ ವಕೀಲರು ವಿವರಣೆ ನೀಡಿದ್ದಾರೆ ಹೇಳಿದ್ದಾರೆ.
ಈ ವಿಚಾರಣೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ವಿಭಾಗೀಯ ಪೀಠ ಅಕ್ಟೊಬರ್ 21 ಕ್ಕೆ ಮುಂದೂಡಿದೆ.