ಭಾರತ ಸರ್ಕಾರ ಪ್ರದಾನ ಮಂತ್ರಿ ಪಿಎಂ ಕಿಸಾನ್ ಖಾತೆ ಕೆವೈಸಿ ಪೂರ್ತಿ ಮಾಡಲು ಗಡುವನ್ನು ಜುಲೈ 31 ವರೆಗೆ ವಿಸ್ತರಿಸಿದೆ. ಮೇ 31, 2022ವರೆಗೆ ಈ ಹಿಂದೆ ಗಡುವನ್ನು ನಿಗದಿಪಡಿಸಲಾಗಿತ್ತು. ಆದರೆ ರೈತರ ಅನುಕೂಲಕ್ಕಾಗಿ 11ನೇ ಕಂತು 2000 ರೂ. ಪಡೆಯಲು ಅದನ್ನು ಈಗ ಜುಲೈ 31, 2022ರವರೆಗೆ ವಿಸ್ತರಿಸಲಾಗಿದೆ.
ಇನ್ನು, OTP ಆಧಾರಿತ ಪಿಎಂ ಕಿಸಾನ್ ಇ-ಕೆವೈಸಿ PMKISAN ಪೋರ್ಟಲ್ ನಲ್ಲಿ ಲಭ್ಯವಿದೆ ಅಥವಾ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಹತ್ತಿರದ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.
PM ಕಿಸಾನ್ ಯೋಜನೆಯ ಇಕೆವೈಸಿ ಪ್ರಕ್ರಿಯೆ ಹೇಗೆ?
*http://pmkisan.nic.in/ ಗೆ ಭೇಟಿ ನೀಡಿ.
*ಫಾರ್ಮರ್ಸ್ ಕಾರ್ನರ್’ ವಿಭಾಗದ ಅಡಿಯಲ್ಲಿ ‘eKYC’ ಕ್ಲಿಕ್ ಮಾಡಿ.
*ಈಗ ನಿಮ್ಮನ್ನು ‘OTP ಆಧಾರಿತ Ekyc’ ಪುಟಕ್ಕೆ ಮರು ನಿರ್ದೇಶಿಸಲಾಗುತ್ತದೆ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ನಂತರ ‘search’ ಕ್ಲಿಕ್ ಮಾಡಿ.
*ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ, ‘Get OTP’ ಕ್ಲಿಕ್ ಮಾಡಿ.
* OTP ನಮೂದಿಸಿ. ಎಲ್ಲ ವಿವರ ಹೊಂದಾಣಿಕೆಯಾದರೆ eKYC ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.