Dussehra holiday : ನಾಡ ಹಬ್ಬ ದಸರಾ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅರಮನೆ ನಗರಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದು, ಈ ನಡುವೆ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಇಂದಿನಿಂದ ಅಕ್ಟೋಬರ್ 20ರ ವರೆಗೆ ದಸರಾ ರಜೆ ಘೋಷಣೆ ಮಾಡಿದೆ.
ಹೌದು, ಈ ಬಾರಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಏಕರೀತಿಯಲ್ಲಿ ಒಟ್ಟು 17 ದಿನ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ಘೋಷಿಸಲಾಗಿದೆ. ಈ ಮೊದಲು ಕರಾವಳಿ ಭಾಗದ ಜಿಲ್ಲೆಗಳ ಶಾಲೆಗಳ ರಜೆಯಲ್ಲಿ ಬದಲಾವಣೆ ಇರುತ್ತಿದ್ದವು. ಇನ್ನು, ಅಕ್ಟೋಬರ್ 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಏಪ್ರಿಲ್ 10 ತನಕ ಶಾಲೆಗಳು ನಡೆಯಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕುರಿತಂತೆ ಆದೇಶ ಹೊರಡಿಸಿದೆ.
ಇದನ್ನೂ ಓದಿ : ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಇದೇ ವರ್ಷದಲ್ಲಿ ಕಾಮಗಾರಿ ಪ್ರಾರಂಭ – ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ
2024- 2025ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳು ಆರಂಭಕ್ಕೂ ಮುನ್ನ ಪ್ರಕಟಣೆ ಹೊರಡಿಸಿದ್ದು, ಅದರ ನಿಯಮಾನುಸಾರದಂತೆ ರಜೆಗಳು ಘೋಷಣೆಯಾಗಿವೆ.
Dussehra holiday : ರಾಜ್ಯ ಹೈಕೋರ್ಟ್‌ಗೆ 8 ದಿನಗಳವರೆಗೆ ದಸರಾ ರಜೆ..!
ಇಂದಿನಿಂದ ರಾಜ್ಯ ಹೈಕೋರ್ಟ್‌ಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 10ರವರೆಗೆ ಒಟ್ಟು 8 ದಿನಗಳ ಕಾಲ ರಜೆ ಇದ್ದು, ಅಕ್ಟೋಬರ್ 14ರಿಂದ ಕಲಾಪಗಳು ಮತ್ತೆ ಆರಂಭ ಆಗಲಿವೆ.
ಆದರೆ ಅಕ್ಟೋಬರ್ 4 ಮತ್ತು ಅಕ್ಟೋಬರ್ 9 ರಂದು ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ತಲಾ ಒಂದು ವಿಭಾಗೀಯ ನ್ಯಾಯಪೀಠ ಮತ್ತು ಎರಡು ಏಕಸದಸ್ಯ ನ್ಯಾಯಪೀಠಗಳ ಕಲಾಪ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಅಮೆಜಾನ್ ಫ್ಲಿಪ್‌ಕಾರ್ಟ್ ಫೆಸ್ಟಿವಲ್ ಸೇಲ್; ಶಾಪಿಂಗ್ ಪ್ರಿಯರಿಗೆ ಸಕ್ಕತ್ ಕೊಡುಗೆ




