ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ ಕಾರಣ ಏನು ಗೊತ್ತೇ?

Liquor sales | ಕಳೆದ ಆರು ತಿಂಗಳಿಂದ ಕರ್ನಾಟಕದಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ದಾಖಲಾಗಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬ೦ದ ನ೦ತರ ಮದ್ಯದ ಬೆಲೆ ಪದೇಪದೆ ಹೆಚ್ಚುತ್ತಿರುವುದರಿ೦ದ ಮಾರುಕಟ್ಟೆಯ ಚೇತರಿಕೆ ಕಾಣುತ್ತಿಲ್ಲ. ಆದರೂ,…

liquor sales

Liquor sales | ಕಳೆದ ಆರು ತಿಂಗಳಿಂದ ಕರ್ನಾಟಕದಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ದಾಖಲಾಗಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬ೦ದ ನ೦ತರ ಮದ್ಯದ ಬೆಲೆ ಪದೇಪದೆ ಹೆಚ್ಚುತ್ತಿರುವುದರಿ೦ದ ಮಾರುಕಟ್ಟೆಯ ಚೇತರಿಕೆ ಕಾಣುತ್ತಿಲ್ಲ. ಆದರೂ, ಅಬಕಾರಿ ಸುಂಕದ ಏರಿಕೆಯಿಂದ ಸರ್ಕಾರದ ಆದಾಯ ಮಾತ್ರ ಹೆಚ್ಚಾಗಿದೆ ಎನ್ನುವುದು ಆಸಕ್ತಿದಾಯಕ ಸಂಗತಿ.

ಅಂಕಿಗಳಲ್ಲಿ ಇಳಿಕೆ ಸ್ಪಷ್ಟ

ಅಬಕಾರಿ ಇಲಾಖೆಯ ಅರ್ಧವಾರ್ಷಿಕ ವರದಿ ಪ್ರಕಾರ, 2023ರ ಏಪ್ರಿಲ್-ಸೆಪ್ಟೆಂಬರ್ ನಲ್ಲಿ 352.83 ಲಕ್ಷ ಬಾಕ್ಸ್ ಐಎ೦ಎಲ್ ಮಾರಾಟವಾಗಿದ್ದು, 2024ರ ಇದೇ ಅವಧಿಯಲ್ಲಿ 345.76 ಲಕ್ಷ ಬಾಕ್ಸ್ 2025ರ ಇದೇ ಅವಧಿಯಲ್ಲಿ 342.93 ಲಕ್ಷ ಬಾಕ್ಸ್ ಆಗಿದೆ. ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ 2.83 ಲಕ್ಷ ಬಾಕ್ಸ್ ವ್ಯಾಪಾರ ಕುಸಿತ! ಮದ್ಯ ಮಾರಾಟಗಾರರ ಪ್ರಕಾರ, ಶೇ. 15-20ರಷ್ಟು ವ್ಯಾಪಾರ ಕಡಿಮೆಯಾಗಿದೆ.

  • ಬಿಯ‌ರ್ ಮಾರಾಟ ಶೇ. 19 ರಷ್ಟು ಕುಸಿತ
  • ಬಿಯರ್ ಮಾರಾಟವೂ ಇದೇ ದಿಕ್ಕಿನಲ್ಲಿ ಸಾಗುತ್ತಿದೆ.
  • 2024ರ ಏಪ್ರಿಲ್-ಸೆಪ್ಟೆಂಬರ್: 242.73 ಲಕ್ಷ ಬಾಕ್ಸ್.
  • 2025ರ ಇದೇ ಅವಧಿ: 195.27 ಲಕ್ಷ ಬಾಕ್ಸ್ ಒಟ್ಟು 47.46 ಲಕ್ಷ ಬಾಕ್ಸ್ ಇಳಿಕೆಯಾಗಿದ್ದು, ಪ್ರತಿ ತಿಂಗಳು ಬಿಯರ್ ಮಾರಾಟ ಕುಸಿಯುತ್ತಲೇ ಇದೆ

ಬಿಯರ್ ಪ್ರಿಯರ ಅಸಮಾಧಾನ

ಬಿಯರ್ ಪ್ರಿಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ‘ಹಿಂದೆ ಮೂರು ಬಿಯರ್ ಕುಡಿಯುತ್ತಿದ್ದೆವು, ಈಗ ಬೆಲೆ ಏರಿಕೆಯಿ೦ದ ಒ೦ದೇ ಬಿಯರ್‌ಗೂ ಕಷ್ಟವಾಗಿದೆ’ ಎಂದಿದ್ದಾರೆ. ಕೆಲವರು ‘ಕನಿಷ್ಠ 100 ರೂಪಾಯಿಗೆ ಒಂದು ಬಿಯರ್ ನೀಡಬೇಕು’ ಎಂಬ ಬೇಡಿಕೆಯನ್ನೂ ವ್ಯಕ್ತಪಡಿಸಿದ್ದಾರೆ.

Vijayaprabha Mobile App free

ಸರ್ಕಾರಕ್ಕೆ ಆದಾಯ, ವ್ಯಾಪಾರಿಗಳಿಗೆ ನಷ್ಟ

ಮದ್ಯದ ದರ ಏರಿಕೆಯಿಂದ ವ್ಯಾಪಾರ ಕುಗ್ಗಿದ್ದರೂ, ಅಬಕಾರಿ ಸುಂಕದಿಂದ ರಾಜ್ಯ ಸರ್ಕಾರದ ಖಜಾನೆ ತುಂಬುತ್ತಿದೆ. ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದರೆ, ಸರ್ಕಾರ ಹೆಚ್ಚಿದ ತೆರಿಗೆ ಆದಾಯದಿ೦ದ ಖುಷಿಯಲ್ಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.