ಹೆಚ್ಚು ಮಾಲಿನ್ಯ ಕ್ಯಾನ್ಸರ್​ಗೆ ಕಾರಣವಾಗುತ್ತಾ? ಮಾಲಿನ್ಯದಿಂದ ಚರ್ಮದ ಆರೈಕೆ ಹೇಗೆ? ಇಲ್ಲಿದೆ ಮಾಹಿತಿ

Pollution cause cancer : ನಿಮಗೆ ತಿಳಿದಿದೆಯೇ.. ವಿಷಕಾರಿ ಗಾಳಿಯನ್ನು ಉಸಿರಾಡುವುದು ದಿನಕ್ಕೆ 12 ಸಿಗರೇಟುಗಳಿಗೆ ಸಮನಾದ ಧೂಮಪಾನ ಮಾಡಿದಂತೆ. ಇದೀಗ ಮತ್ತೊಂದು ಇಂಥದ್ದೇ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹೌದು, ವೈದ್ಯರು ಪ್ರಕಾರ, ಮಾಲಿನ್ಯದಿಂದಾಗಿ…

Pollution cause skin cancer

Pollution cause cancer : ನಿಮಗೆ ತಿಳಿದಿದೆಯೇ.. ವಿಷಕಾರಿ ಗಾಳಿಯನ್ನು ಉಸಿರಾಡುವುದು ದಿನಕ್ಕೆ 12 ಸಿಗರೇಟುಗಳಿಗೆ ಸಮನಾದ ಧೂಮಪಾನ ಮಾಡಿದಂತೆ. ಇದೀಗ ಮತ್ತೊಂದು ಇಂಥದ್ದೇ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಹೌದು, ವೈದ್ಯರು ಪ್ರಕಾರ, ಮಾಲಿನ್ಯದಿಂದಾಗಿ ನಿಮ್ಮ ಚರ್ಮವು ಹದಗೆಡುತ್ತದೆ, ತೀವ್ರತೆ ಹೆಚ್ಚಾದಂತೆ ಚರ್ಮದ ಕ್ಯಾನ್ಸರ್​ಗೆ ಕಾರಣವಾಗುತ್ತದಂತೆ. ಅದಕ್ಕಾಗಿಯೇ ಹೆಚ್ಚು ಸುತ್ತಾಡುವ ಜನರ ಮುಖ ವಯಸ್ಸಾದಂತೆ ಕಾಣುತ್ತದೆ. ಜೊತೆಗೆ ಚರ್ಮದ ಮೇಲೆ ಹೆಚ್ಚುವರಿ ವರ್ಣದ್ರವ್ಯ ಮತ್ತು ಸುಕ್ಕುಗಳು ಬರಲು ಪ್ರಾರಂಭಿಸುತ್ತವೆ.

Pollution cause cancer

Vijayaprabha Mobile App free

ಅತೀ ಮಾಲಿನ್ಯಕಾರಕ ಗಾಳಿಯಲ್ಲಿ ಓಡಾಡುವುದರಿಂದ ಚರ್ಮದ ಮೇಲೆ ಶುಷ್ಕತೆ ಮತ್ತು ಬಿರುಕುಗಳು ಕಂಡುಬರುತ್ತವೆ. ತಜ್ಞರ ಪ್ರಕಾರ, ಅಲ್ಲದೆ ಮಾಲಿನ್ಯವು ಶ್ವಾಸಕೋಶದ ಮೇಲೆ ತುಂಬಾ ಪರಿಣಾಮ ಬೀರುತ್ತದೆ, ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಈಗಾಗಲೇ ದೆಹಲಿ ಮತ್ತಿತರ ಭಾಗದಲ್ಲಿ ಜನರು ಕೆಮ್ಮು, ತಲೆನೋವು, ಕಣ್ಣುಗಳಲ್ಲಿ ಕಿರಿಕಿರಿ, ಆಯಾಸವಾಗುತ್ತಿರುವ ಬಗ್ಗೆ ಹೆಚ್ಚು ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಮುಂದೊಂದು ದಿನ ನಮಗೂ ಈ ಪರಿಸ್ಥಿತಿ ಬರಬಹುದು ಎನ್ನುತ್ತಾರೆ ತಜ್ಞರು.

ಮಾಲಿನ್ಯದಿಂದ ಚರ್ಮದ ಆರೈಕೆ ಹೇಗೆ?

  • ತ್ವಚೆಯನ್ನು ತೇವಾಂಶದಿಂದ ಇರಿಸಿಕೊಳ್ಳಿ.
  • ಚರ್ಮಕ್ಕೆ ನಿಯಮಿತವಾಗಿ ತೆಂಗಿನ ಎಣ್ಣೆ ಮತ್ತು ಉತ್ತಮ ಮಾಯಿಶ್ಚರೈಸರ್ ಕ್ರೀಮ್ ಅನ್ನು ಬಳಸಬಹುದು.
  • ಸ್ನಾನಕ್ಕೆ ಹೆಚ್ಚು ಬಿಸಿನೀರನ್ನು ಬಳಸಬೇಡಿ.
  • ಹೆಚ್ಚು ನೀರು ಕುಡಿಯಿರಿ.
  • ಹೊರಗೆ ಹೋಗುವಾಗ, ಚರ್ಮವನ್ನು ಸಾಧ್ಯವಾದಷ್ಟು ಮುಚ್ಚಿಕೊಂಡು ತಿರುಗಾಡಿ.
  • ಹೆಚ್ಚಿನ ದಟ್ಟಣೆ ಇರುವಾಗ ವಾಕಿಂಗ್ ಗೆ ಹೋಗಬೇಡಿ.
  • ಹಸಿರು ತರಕಾರಿ, ಧಾನ್ಯ & ಹಣ್ಣುಗಳನ್ನು ಆಹಾರದಲ್ಲಿ ಸೇವಿಸಿ.
  • ಹೆಚ್ಚು ಹೆಚ್ಚು ದ್ರವ ರೂಪದ ಆಹಾರವನ್ನು ಸೇವನೆ ಮಾಡಿ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.