ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸ್ಯಾಂಡಲ್‌ವುಡ್ ಸ್ಟಾರ್ ದರ್ಶನ್ ಅವರಿಗೆ ಬೆನ್ನು ನೋವು ನಾಟಕವಲ್ಲ, ನಿಜವಾದ ಸಮಸ್ಯೆ ಎಂದು ‘ಡೆವಿಲ್’ ಸಿನಿಮಾ ನಾಯಕಿ ರಚನಾ ರೈ (Rachana Rai ) ಅವರು ದೃಢಪಡಿಸಿದ್ದಾರೆ.
ನಟ ದರ್ಶನ್ ಬೆನ್ನು ನೋವಿನ ಬಗ್ಗೆ ಅವರೊಂದಿಗೆ ಡೆವಿಲ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಚನಾ ರೈ ಮಾತನಾಡಿದ್ದು, “ದರ್ಶನ್ ಸರ್‌ಗೆ ಆಗಾಗ ತೀವ್ರ ಬೆನ್ನು ನೋವು ಕಾಡುತ್ತಿತ್ತು. ನಾನೇ ಪ್ರತ್ಯಕ್ಷ ಸಾಕ್ಷಿ. ಅವರು ಟ್ಯಾಬ್ಲೆಟ್‌ಗಳನ್ನು ಸೇವಿಸುತ್ತಿದ್ದರು. ಜ್ವರ ಬಂದರೂ, ವಾಂತಿ ಆದರೂ ಶೂಟಿಂಗ್‌ಗೆ ತೊಂದರೆಯಾಗದಂತೆ ರೆಸ್ಟ್ ತೆಗೆದುಕೊಳ್ಳದೆ ಕ್ಯಾಮೆರಾ ಮುಂದೆ ಬರುತ್ತಿದ್ದರು.” ಇದಕ್ಕೆ ನಾನೇ ಸಾಕ್ಷಿʼ ಎಂದು ಹೇಳಿದ್ದಾರೆ
ವಿಶೇಷವಾಗಿ, ಒಂದು ದೃಶ್ಯದಲ್ಲಿ ತನ್ನನ್ನು ಎತ್ತಿಕೊಳ್ಳುವ ಸೀನ್ ಚಿತ್ರೀಕರಣ ಮಾಡುತ್ತಿದ್ದ ಸಮಯದಲ್ಲಿ ನೋವು ತೀವ್ರವಾಗಿತ್ತು. “ನಿರ್ದೇಶಕರು ‘ಆಗಲ್ಲ ಅಂದ್ರೆ ಬೇಡ’ ಅಂದ್ರು. ಆದರೆ ‘ನಾನು ಮಾಡ್ತೀನಿ’ ಅಂತ ಒಪ್ಪಿಕೊಂಡರು. ‘ಕಟ್’ ಹೇಳಿದ ತಕ್ಷಣ ನನ್ನನ್ನು ಕೆಳಕ್ಕಿಳಿಸಿ ಬೆನ್ನು ನೋವಿನಿಂದ ನೆಲಕ್ಕೆ ಬಿದ್ದು ಮಲಗಿಬಿಟ್ಟರು ಎಂದು ಡೆವಿಲ್ ನಾಯಕಿ ರಚನಾ ರೈ ಹೇಳಿಕೆ ನೀಡಿದ್ದಾರೆ.
ವೈರಲ್ ವಿಡಿಯೋ, ಜಾಮೀನು ಹಿನ್ನೆಲೆ
ದರ್ಶನ್ ಅವರ ಬೇಲ್ ರದ್ದಾದ ಬಳಿಕ ‘ಡೆವಿಲ್’ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ದರ್ಶನ್ ಬೆನ್ನು ನೋವು ತೋರುವ ವಿಡಿಯೋ ವೈರಲ್ ಆಗಿತ್ತು. ದರ್ಶನ್ ಅವರು ಬೆನ್ನು ಸರ್ಜರಿಗಾಗಿ ಮಧ್ಯಂತರ ಜಾಮೀನು ಪಡೆದಿದ್ದರು. ನಂತರ ರೆಗ್ಯುಲರ್ ಬೇಲ್ ಸಿಕ್ಕಿತ್ತಾದರೂ ಸುಪ್ರೀಂ ಕೋರ್ಟ್ ಮತ್ತೆ ರದ್ದುಗೊಳಿಸಿತು.
ಇನ್ನು, ದರ್ಶನ್ ಅವರಿಗೆ ಬೆನ್ನು ನೋವು ನಿಜ. ಅದರಿಂದ ಒದ್ದಾಡಿದ್ದಾರೆ. ಇದು ನಾಟಕವಲ್ಲ” ಎನ್ನುವ ರಚನಾ ರೈ ಸ್ಪಷ್ಟ ಹೇಳಿಕೆಯಿಂದ ದರ್ಶನ್ ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಇದ್ದ ಸಂಶಯಗಳಿಗೆ ತಿಲಾಂಜಲಿ ಸಿಕ್ಕಂತಾಗಿದೆ.




