ಜೈಪುರ್: ರಾಜಸ್ಥಾನ ಐಎಎಸ್ ದಂಪತಿಗಳು ಮದುವೆಯಾದ ಎರಡು ವರ್ಷಗಳ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಥರ್ ಅಮೀರ್ ಖಾನ್ ಮತ್ತು ಟೀನಾ ದಾಬಿ ಪರಸ್ಪರ ಒಪ್ಪಿಗೆಯಿಂದ ಜೈಪುರ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲವ್ ಜಿಹಾದ್ ನ ಭಾಗವಾಗಿ ದಂಪತಿಗಳ ವಿವಾಹವಾಗೆದೆ ಎಂದು ಹಿಂದೂ ಮಹಾಸಭಾ ಆರೋಪಿಸಿದ್ದವು. ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಕಾಶ್ಮೀರದ ಅಥರ್ ಅಮೀರ್ ಖಾನ್ ಎರಡನೇ ಸ್ಥಾನ ಪಡೆದರೆ, ಟೀನಾ ಅದೇ ಬ್ಯಾಚ್‌ನಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಪತಿ ಪದಕ ಪಡೆಡಿದ್ದರು.
2016 ರ ಐಎಎಸ್ ಬ್ಯಾಚ್‌ನ ತಮ್ಮ ತರಬೇತಿಯ ಸಮಯದಲ್ಲಿ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದರು. ತರಬೇತಿಯ ನಂತರ, ಅವರಿಬ್ಬರಿಗೂ ಜೈಪುರದಲ್ಲಿ ಪೋಸ್ಟಿಂಗ್ ಸಿಕ್ಕಿತು. ನಂತರ ಅಮೀರ್ ಮತ್ತು ಟೀನಾ ಮಾರ್ಚ್ 2018 ರಲ್ಲಿ ವಿವಾಹವಾದರು. ಎರಡು ವರ್ಷಗಳ ಕಾಲ ಸುಖ ಸಂಸಾರ ನಡೆಸಿದ ಇಬ್ಬರೂ ಆ ನಂತರ ಸಂಸಾರದಲ್ಲಿ ಭಿನ್ನಾಭಿಪ್ರಾಯ ತಲೆದೂರಿತ್ತು ಎನ್ನಲಾಗಿದೆ.
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಟೀನಾ ತನ್ನ ತನ್ನ ಹೆಸರಿನಲ್ಲಿ ಖಾನ್ ಎಂಬ ಹೆಸರನ್ನು ತೆಗೆದುಹಾಕಿದ್ದು, ಇಬ್ಬರ ನಡುವೆ ಬಿನ್ನಾಭಿಪ್ರಾಯ ಉಂಟಾಗಿದೆ ಎಂದು ತಿಳಿಸಿದೆ. ಇದೇ ಸಮಯದಲ್ಲಿ ಅಮೀರ್ ಖಾನ್ ಅವರು ಪತ್ನಿ ಟೀನಾ ಅವರನ್ನು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಅನ್ ಫಾಲೋ ಮಾಡಿದ್ದಾರೆ. ಈಗ ಇಬ್ಬರು ಒಟ್ಟಿಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.