ಉಚಿತ ವಿದ್ಯುತ್ ಯೋಜನೆ; ಸರ್ಕಾರಕ್ಕೆ ತನ್ನ ಮಾತಿನ ಮೇಲೇ ನಿಲ್ಲುವ ಯೋಗ್ಯತೆಯಿಲ್ಲ: ಗುಂಡೂರಾವ್

ಬೆಂಗಳೂರು: ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ರಾಜಧರ್ಮ, ಬೊಮ್ಮಾಯಿ ಸರ್ಕಾರಕ್ಕೆ ತನ್ನ ಮಾತಿನ ಮೇಲೇ ನಿಲ್ಲುವ ಯೋಗ್ಯತೆಯಿಲ್ಲ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹೌದು, ಈ ಕುರಿತು ಟ್ವೀಟ್…

dinesh gundu rao vijayaprabha

ಬೆಂಗಳೂರು: ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ರಾಜಧರ್ಮ, ಬೊಮ್ಮಾಯಿ ಸರ್ಕಾರಕ್ಕೆ ತನ್ನ ಮಾತಿನ ಮೇಲೇ ನಿಲ್ಲುವ ಯೋಗ್ಯತೆಯಿಲ್ಲ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಹೌದು, ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, BJP ಸರ್ಕಾರ ಕೇವಲ 15 ದಿನದ ಹಿಂದಷ್ಟೇ SC/ST ಸಮುದಾಯದ BPL ಕಾರ್ಡ್‌ದಾರರಿಗೆ 75 ಯೂನಿಟ್ ಉಚಿತ ವಿದ್ಯುತ್ ಯೋಜನೆ ಘೋಷಿಸಿ ಈಗ ಏಕಾಏಕಿ ಹಿಂಪಡೆದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ನಾಟಕ ಯಾಕೆ ಆಡಬೇಕು? ಕೊಟ್ಟ ಮಾತನ್ನೂ ಉಳಿಸಿಕೊಳ್ಳುವ ಬದ್ಧತೆ ಈ ಸರ್ಕಾರಕ್ಕಿಲ್ಲವೆ?

ಉಚಿತ ವಿದ್ಯುತ್‌ಗಾಗಿ SC/ST ಸಮುದಾಯದವರೂ ಈ ಸರ್ಕಾರಕ್ಕೇನು ಅರ್ಜಿಯೂ ಹಾಕಿರಲಿಲ್ಲ, ಭಿಕ್ಷೆಯೂ ಬೇಡಿರಲಿಲ್ಲ.‌ ಸ್ವತಃ ಸರ್ಕಾರವೇ 75ಯೂನಿಟ್ ಉಚಿತ ವಿದ್ಯುತ್ ಯೋಜನೆ ಘೋಷಿಸಿ, ಈಗ ಸದ್ದೇ ಇಲ್ಲದೆ ವಾಪಾಸ್ ಪಡೆದಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ರಾಜಧರ್ಮ. ಈ ಬೊಮ್ಮಾಯಿ ಸರ್ಕಾರಕ್ಕೆ ತನ್ನ ಮಾತಿನ ಮೇಲೇ ನಿಲ್ಲುವ ಯೋಗ್ಯತೆಯಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.