ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಬೀಡಿ ಗ್ರಾಮದ ವೃದ್ಧ ದಂಪತಿ ಸೈಬರ್ ವಂಚನೆಗೊಳಗಾಗಿ 50 ಲಕ್ಷ ರೂಪಾಯಿ ಕಳೆದುಕೊಂಡ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಜಿಟಲ್ ಅರೆಸ್ಟ್ ಭಯದಿಂದ ವಂಚನೆಗೊಳಗಾದ ದಂಪತಿ ತಮ್ಮ ಜೀವನವನ್ನು ಕೊನೆಗೊಳಿಸಿದ ಮೊದಲ ಪ್ರಕರಣ ಇದಾಗಿದೆ ಎಂದು ಹೇಳಲಾಗುತ್ತದೆ.
ಮೃತರನ್ನು ಖಾನಾಪುರದ ಬೀಡಿಯ ಕ್ರಿಶ್ಚಿಯನ್ ಗಲ್ಲಿ ನಿವಾಸಿ ಡೊರ್ಗ್ಜೆರಾನ್ ಅಲಿಯಾಸ್ ಡಿಯಾಗೊ ಸಂತಾನ್ ನಜರೆತ್(82) ಮತ್ತು ಅವರ ಪತ್ನಿ ಫ್ಲಾವಿಯಾನಾ (79) ಎಂದು ಗುರುತಿಸಲಾಗಿದೆ.
ಮೃತರ ಖಾತೆಯಿಂದ 50 ಲಕ್ಷ ರೂಪಾಯಿಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ. ವಂಚಕರಿಗೆ ಎಷ್ಟು ಹೋಯಿತು ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಹೇಳಿದರು.
ಡೋರ್ಗ್ಜೆರಾನ್ ನೀರಿನ ತೊಟ್ಟಿಯಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಕುಡುಗೋಲಿನಿಂದ ಕುತ್ತಿಗೆಗೆ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇನ್ನೊಂದೆಡೆ ಮನೆಯಲ್ಲಿ ನಿರ್ಜೀವ ಸ್ಥಿತಿಯಲ್ಲಿ ಫ್ಲಾವಿಯಾನಾ ಶವವಾಗಿ ಪತ್ತೆಯಾಗಿದ್ದು, ನಿದ್ರಾ ಮಾತ್ರೆಗಳನ್ನು ಸೇವಿಸಿರಬಹುದು. ಫ್ಲಾವಿಯಾನಾ ನಿರ್ಜೀವವಾಗಿ ಬಿದ್ದಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು.
ಡೆತ್ ನೋಟ್, ಕುಡಗೋಲು ಮತ್ತು ಡೊರ್ಗ್ಜೆರಾನ್ ಬಳಸಿದ ಮೊಬೈಲ್ ಫೋನ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಇಂಗ್ಲಿಷ್ನಲ್ಲಿದ್ದ ಕೈಬರಹದ ಎರಡು ಪುಟಗಳ ಆತ್ಮಹತ್ಯೆ ಪತ್ರದಲ್ಲಿ, ಡಾರ್ಗ್ಜೆರಾನ್ ಅವರು ಮತ್ತು ಅವರ ಪತ್ನಿ ಯಾರೊಬ್ಬರ ಕರುಣೆಯಿಂದ ಬದುಕಲು ಬಯಸದ ಕಾರಣ ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ಮಕ್ಕಳಿಲ್ಲದ ದಂಪತಿಗಳು, ತಮ್ಮ ಕೃತ್ಯಕ್ಕೆ ಯಾರನ್ನೂ ದೂಷಿಸಬಾರದು ಎಂದು ಹೇಳಿದರು.
ನಂದಗಢ ಪೊಲೀಸರು ಸೆಲ್ ಫೋನ್, ಕುಡಗೋಲು ಮತ್ತು ಆತ್ಮಹತ್ಯೆ ಪತ್ರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.