Diesel price: ಕಚ್ಚಾತೈಲ ಬೆಲೆ ಏರಿಕೆ ಹಿನ್ನಲೆ ಖಾಸಗಿ ಸ್ವಾಮ್ಯದ ಶೆಲ್ ಇಂಡಿಯಾ ಲೀಟರ್ ಡೀಸೆಲ್ ಬೆಲೆಯನ್ನು 4 ರೂಪಾಯಿ ಹೆಚ್ಚಿಸಿದೆ. ಪರಿಣಾಮ ಒಂದೇ ವಾರದಲ್ಲಿ ಡೀಸೆಲ್ ಬೆಲೆ 20 ರೂಪಾಯಿ ಏರಿಕೆ ಕಂಡಿದೆ. ಮತ್ತೊಂದೆಡೆ, ಸಾರ್ವಜನಿಕ ವಲಯದ ತೈಲ ಕಂಪನಿಗಳು ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಮ್ ಕಂಪನಿಗಳು ಸತತ 18ನೇ ತಿಂಗಳು ದರ (87.99 ರೂ.) ಏರಿಕೆ ಮಾಡಿಲ್ಲ. ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ ದರ 122 ರೂ.ಗೆ ಹೆಚ್ಚಾಗಿದೆ.
ಇದನ್ನೂ ಓದಿ: ಗ್ರೂಪ್ C 119 ಪೋಸ್ಟ್‌ಗಳಿಗೆ ಅರ್ಜಿ ಅಹ್ವಾನ; ಕೆಲವೇ ದಿನಗಳು ಬಾಕಿ
ಹೌದು , ಖಾಸಗಿ ವಲಯದ ಕಂಪನಿ ಶೆಲ್ ಇಂಡಿಯಾ ಒಂದು ವಾರದೊಳಗೆ ಡೀಸೆಲ್ ಬೆಲೆಯನ್ನು ಲೀಟರ್‌ಗೆ 20 ರೂ ಹೆಚ್ಚಿಸಿದೆ. ಮತ್ತೊಂದೆಡೆ, ತೈಲ ಮಾರಾಟದಲ್ಲಿ ಪ್ರಾಬಲ್ಯ ಹೊಂದಿರುವ ಸಾರ್ವಜನಿಕ ವಲಯದ ತೈಲ ಕಂಪನಿಗಳು ಸುಮಾರು 18 ತಿಂಗಳಿಂದ ಅದೇ ಬೆಲೆಗೆ ಡೀಸೆಲ್ ಮಾರಾಟ ಮಾಡುತ್ತಿವೆ ಎಂದು ತಿಳಿದಿದೆ. ಅಂದರೆ ಕಳೆದ ವರ್ಷ ಮೇ ತಿಂಗಳಿನಿಂದ ಈ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸ್ಥಿರವಾಗಿದ್ದು, ಯಾವುದೇ ದರ ಹೆಚ್ಚಿಸಿಲ್ಲ ಎಂದು ಗೊತ್ತಾಗಿದೆ. ಆದರೆ, ಖಾಸಗಿ ಕಂಪನಿ ಶೆಲ್ ಇಂಡಿಯಾ ಬೆಲೆ ಹೆಚ್ಚಿಸಿದ್ದು ಆಘಾತಕಾರಿಯಾಗಿದೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಿಸುತ್ತಿವೆ. ಕಚ್ಚಾ ತೈಲ ದರ ಮತ್ತೆ ಕಡಿಮೆಯಾದರೆ ಮಾತ್ರ ಈ ಬೆಲೆ ಕಡಿಮೆಯಾಗುವ ಸಾಧ್ಯತೆಗಳಿವೆ.
ವಿವಿಧ ನಗರಗಳ ಡೀಸೆಲ್ ದರ
ಶೆಲ್ ವಿಶ್ವದ ಎರಡನೇ ಅತಿದೊಡ್ಡ ತೈಲ ಮತ್ತು ಅನಿಲ ಕಂಪನಿಯಾಗಿದೆ. ಅದರ ಭಾರತೀಯ ಘಟಕವು ಕಳೆದ ವಾರದಿಂದ ಇಂಧನ ಬೆಲೆಯನ್ನು ರೂ. 4ರಷ್ಟು ಏರಿಕೆ ಮಾಡುತ್ತ ಹೋಗಿದೆ ಎಂದು ಕಂಪನಿ ವಿತರಕರು ಮತ್ತು ಉದ್ಯಮ ಮೂಲಗಳು ತಿಳಿಸಿವೆ. ಶೆಲ್ ಇಂಡಿಯಾ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಒಟ್ಟು 346 ಪೆಟ್ರೋಲ್ ಬಂಕ್‌ಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಶೆಲ್ ಕಂಪನಿ ಪ್ರತಿ ಲೀಟರ್‌ಗೆ 122 ರೂ.ಗೆ ಡೀಸೆಲ್ ತೆಗೆದುಕೊಳ್ಳುತ್ತಿದೆ. ಮುಂಬೈನಲ್ಲಿ ಲೀಟರ್ ಡೀಸೆಲ್ ದರ ಈಗ ರೂ.130 ತಲುಪಿದೆ. ಶೆಲ್ ಚೆನ್ನೈನಲ್ಲಿ ಲೀಟರ್ ಡೀಸೆಲ್ ಅನ್ನು ರೂ.129 ಕ್ಕೆ ಮಾರಾಟ ಮಾಡುತ್ತಿದೆ.
ಇದನ್ನೂ ಓದಿ: ಇಂದು ವೃಷಭ ಮತ್ತು ಕರ್ಕಾಟಕ ರಾಶಿಯವರಿಗೆ ಧನ ಲಾಭ..! ಇತರ ರಾಶಿಗಳ ರಾಶಿಫಲ ಹೇಗಿದೆ?
ಅದೇ ಸಮಯದಲ್ಲಿ ಲೀಟರ್ ಪೆಟ್ರೋಲ್ ಬೆಲೆಯೂ ರೂ 117-118 ನಡುವೆ ಮಾರಾಟವಾಗುತ್ತಿದೆ. ಸರ್ಕಾರಿ ವಲಯದ ಕಂಪನಿಗಳ ಅಧೀನದಲ್ಲಿರುವ ಪೆಟ್ರೋಲ್ ಬಂಕ್ ಗಳಲ್ಲಿ ದರಗಳು ಕಡಿಮೆ. ಮುಂಬೈನಲ್ಲಿ ಈ ಲೀಟರ್ ಪೆಟ್ರೋಲ್ ಬೆಲೆ ರೂ.106.31, ಚೆನ್ನೈನಲ್ಲಿ ರೂ. 102.63 ಅದೇ ಆಗಿದೆ. ಮುಂಬೈನಲ್ಲಿ ಸರ್ಕಾರಿ ಸಂಸ್ಥೆಗಳ ಬಂಕ್ ಗಳಲ್ಲಿ ಡೀಸೆಲ್ 1 ಲೀಟರ್ ರೂ. 94.27 ಇದ್ದು, ಚೆನ್ನೈನಲ್ಲಿ ರೂ. 94.24 ರಷ್ಟಿದೆ. ಇಲ್ಲಿ ರಿಲಯನ್ಸ್ – ಬಿಪಿ ಬ್ಯಾಂಕ್‌ಗಳಲ್ಲಿ ರೂ. 87.99ಕ್ಕೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್ ಮೇಲೆ 300 ರೂ ಸಬ್ಸಿಡಿ ಘೋಷಣೆ; 14.2 ಕೆಜಿ ಸಿಲಿಂಡರ್ ಬೆಲೆ 603 ರೂ ಮಾತ್ರ!!
ಶೆಲ್ ಇಂಡಿಯಾ ಬ್ಯಾಂಕ್‌ಗಳಲ್ಲಿ ಗುರುವಾರವೂ ಲೀಟರ್‌ಗೆ ರೂ. 4ರಷ್ಟು ಏರಿಕೆಯಾಗಿದೆ ಎನ್ನುತ್ತಾರೆ ವಿತರಕರು. ಇದರಿಂದ ಮುಂಬೈನಲ್ಲಿ ಗುರುವಾರ ಡೀಸೆಲ್ ಬೆಲೆ 134 ರೂ.ಗೆ ತಲುಪಿದೆ. ಅಕ್ಟೋಬರ್ ತಿಂಗಳಲ್ಲೂ ಇದೇ ರೀತಿ ಮುಂದುವರೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದೇ ವೇಳೆ ಸರಕಾರಿ ಸಂಸ್ಥೆಗಳು ಕೂಡ ಬೆಲೆ ಏರಿಕೆ ಮಾಡುವ ಆತಂಕ ವಾಹನ ಸವಾರರಲ್ಲಿ ಮೂಡಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |