BiggBoss: ಬಿಗ್‌ಬಾಸ್ ಮನೆಯಿಂದ ಧನರಾಜ್ ನಾಮಿನೇಟ್!! ಹೊರ ಹೋಗ್ತಾರಾ, ಉಳಿತಾರಾ?

ಬಿಗ್ ಬಾಸ್ ಕನ್ನಡ ಸೀಸನ್ 11 ಈ ವಾರದ ಎಲಿಮಿನೇಷನ್ಗಾಗಿ ಈಗಾಗಲೇ ನಾಮಿನೇಷನ್ ಆರಂಭಗೊಂಡಿದೆ. ಕ್ಯಾಪ್ಟನ್‌ಗೆ ನೇರ ನಾಮಿನೇಟ್ ಮಾಡುವ ಅವಕಾಶ ಸಿಕ್ಕಿದ್ದು, ಧನರಾಜ್ ಆಚಾರ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಧನರಾಜ್ ಇದರಿಂದ ಬೇಸರಗೊಂಡಿದ್ದು,…

ಬಿಗ್ ಬಾಸ್ ಕನ್ನಡ ಸೀಸನ್ 11 ಈ ವಾರದ ಎಲಿಮಿನೇಷನ್ಗಾಗಿ ಈಗಾಗಲೇ ನಾಮಿನೇಷನ್ ಆರಂಭಗೊಂಡಿದೆ. ಕ್ಯಾಪ್ಟನ್‌ಗೆ ನೇರ ನಾಮಿನೇಟ್ ಮಾಡುವ ಅವಕಾಶ ಸಿಕ್ಕಿದ್ದು, ಧನರಾಜ್ ಆಚಾರ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಧನರಾಜ್ ಇದರಿಂದ ಬೇಸರಗೊಂಡಿದ್ದು, ತಾವು ಅನ್‌ಫಿಟ್ ಎಂದುಕೊಂಡಿದ್ದಾರೆ.

ಸದಸ್ಯರ ಪೈಕಿ ಒಬ್ಬರನ್ನು ನಾಮಿನೇಟ್ ಮಾಡಿ, ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕೆಂದು ಬಿಗ್ ಬಾಸ್ ಕ್ಯಾಪ್ಟನ್ ಶಿಶಿರ್ಗೆ ಕರೆಮಾಡಿ ತಿಳಿಸಿದ್ದಾರೆ. ಅದರಂತೆ ಶಿಶಿರ್ ಅವರು ಧನರಾಜ್ ಅವರ ಹೆಸರನ್ನು ತೆಗೆದುಕೊಂಡಿದ್ದು, ಧನರಾಜ್ ಇನ್ನೂ ಕನ್ಫ್ಯೂಶನ್ನಲ್ಲಿದ್ದಾರೆ. ಈ ಮನೆಯಲ್ಲಿ ಆಟಗಾರನ ಅಥವಾ ಗೆಸ್ಟ್ ಆ ಎಂಬ ಬಗ್ಗೆ ಗೊಂದಲದಲ್ಲಿದ್ದಾರೆ ಎಂದು ತಾವು ನಾಮಿನೇಟ್ ಮಾಡಿರುವುದು ಹಿಂದ ಕಾರಣಗಳನ್ನು ಕೊಟ್ಟಿದ್ದಾರೆ.

ಫೋನ್ ಬೂತ್‌ನಿಂದ ಹೊರಬರುತ್ತಿದ್ದಂತೆ ಅದನ್ನು ವಿವರಿಸಬಹುದಾ? ಎಂದುDh ಶಿಶಿರ್‌ಗೆ ಧನರಾಜ್ ಕೇಳಿಕೊಂಡಿದ್ದಾರೆ. ನೀವೆಲ್ಲೋ ಕಳೆದು ಹೋಗಿದ್ದೀರಾ ಅನ್ನೋದು ನನ್ನ ಅಭಿಪ್ರಾಯ ಎಂದು ಶಿಶಿರ್ ಹೇಳಿದ್ದು, ಅದಕ್ಕೆ ಮಚ್ಚಾ ಮಚ್ಚಾ ಬಚ್ಚಲ್ ಮನೆ ಸ್ವಚ್ಛ ಎಂದು ಹೇಳುತ್ತಲೇ ಧನರಾಜ್ ಕಹಿ ಜ್ಯೂಸ್ ಅನ್ನು ಕುಡಿದಿದ್ದಾರೆ. ಅಲ್ಲದೇ, ಈ ಮನೆಗೆ ನಾನೇ ಅನ್ಫಿಟ್ ಅನ್ಸೋಕೆ ಶುರುವಾಗೋಗಿದೆ ಎಂದು ಧನರಾಜ್ ಕೊರಗಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.