ಬಳ್ಳಾರಿ: ಜಪ್ತಿ ಮಾಡಿದ ಮದ್ಯ ಹಾಗೂ ಬೆಲ್ಲದ ಕೊಳೆ‌ ನಾಶ

ಬಳ್ಳಾರಿ, ಮಾ.30: ಬಳ್ಳಾರಿ ಅಬಕಾರಿ ಜಿಲ್ಲಾ ಅಧಿಕಾರಿಗಳ ಸೂಚನೆ ಮೇರೆಗೆ‌ ನಗರದ ನಲ್ಲಚೆರವು ಪ್ರದೇಶದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಂಗಳವಾರ ಜಪ್ತಿ ಮಾಡಿದ ಮದ್ಯ, ಬೀರ್, ಸೆಂದಿ,ಕಳ್ಳಭಟ್ಟಿ ಸಾರಾಯಿ ಮತ್ತು ಬೆಲ್ಲದ ಕೊಳೆಯನ್ನು ನಾಶಪಡಿಸಲಾಗಿದೆ.…

liquor-and-jaggery-vijayaprabha-news

ಬಳ್ಳಾರಿ, ಮಾ.30: ಬಳ್ಳಾರಿ ಅಬಕಾರಿ ಜಿಲ್ಲಾ ಅಧಿಕಾರಿಗಳ ಸೂಚನೆ ಮೇರೆಗೆ‌ ನಗರದ ನಲ್ಲಚೆರವು ಪ್ರದೇಶದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಂಗಳವಾರ ಜಪ್ತಿ ಮಾಡಿದ ಮದ್ಯ, ಬೀರ್, ಸೆಂದಿ,ಕಳ್ಳಭಟ್ಟಿ ಸಾರಾಯಿ ಮತ್ತು ಬೆಲ್ಲದ ಕೊಳೆಯನ್ನು ನಾಶಪಡಿಸಲಾಗಿದೆ.

ಅಬಕಾರಿ ಉಪ ಅಧೀಕ್ಷಕರಾದ ಬಿ.ಎಸ್. ಪೂಜಾರ ಹಾಗೂ ಕೆಎಸ್ ಬಿಸಿಎಲ್ ಡಿಪೋ ಮ್ಯಾನೇಜರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಹಾಗೂ ಬಳ್ಳಾರಿ ವಲಯ ನಂಬರ್-1 ಅಧಿಕಾರಿ ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ನಾಶಪಡಿಸಲಾಗಿದೆ.

30 ಪ್ರಕರಣಗಳಲ್ಲಿ ಜಪ್ತಿ ಮಾಡಿದ 4133 ಲೀಟರ್ ಮದ್ಯ ಹಾಗೂ 1007 ಲೀಟರ್ ಬೀರ್ ಹಾಗೂ 0.275 ಲ್ಯಾಬ್ , 01 ಲೀಟರ್ ಸೇಂದಿಯನ್ನು ಹಾಗೂ 72 ಲೀಟರ್ ಕಳ್ಳಬಟ್ಟಿ ಸರಾಯಿ ಹಾಗೂ 80 ಲಿಟರ್ ಬೆಲ್ಲದ ಕೊಳೆಯನ್ನು ನಾಶಪಡಿಸಲಾಯಿತು.ಈ ಸಂದರ್ಭದಲ್ಲಿ ‌ಅಬಕಾರಿ ಇಲಾಖೆಯ ಅಧಿಕಾರಿಗಳು ‌ಮತ್ತು ಸಿಬ್ಬಂದಿ ಇದ್ದರು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.