ಸ್ಮಶಾನದ ಮೇಲ್ಚಾವಣಿ ಕುಸಿತದಿಂದ ಸಾವಿನ ಸಂಖ್ಯೆ 25 ಕ್ಕೆ ಏರಿಕೆ; ಮೃತ ಕುಟುಂಬಗಳಿಗೆ 2 ಲಕ್ಷ ರೂ; ಮೂವರ ಬಂಧನ

ಲಖನೌ: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮುರಾದ್‌ನಗರದ ಸ್ಮಶಾನದಲ್ಲಿ ಮೇಲ್ಚಾವಣಿ ಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 25 ಕ್ಕೆ ಏರಿಕೆಯಾಗಿದ್ದು, ಸತ್ತವರೆಲ್ಲರೂ ಪುರುಷರು ಎಂದು ತಿಳಿದು ಬಂದಿದೆ. ಭಾನುವಾರ, ಮೃತ ಜೈರಂ ಎಂಬುವರ ಅಂತ್ಯಕ್ರಿಯೆಗಾಗಿ ಅವರ ಸಂಬಂಧಿಕರು…

cemetery roof collapsed vijayaprabha

ಲಖನೌ: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮುರಾದ್‌ನಗರದ ಸ್ಮಶಾನದಲ್ಲಿ ಮೇಲ್ಚಾವಣಿ ಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 25 ಕ್ಕೆ ಏರಿಕೆಯಾಗಿದ್ದು, ಸತ್ತವರೆಲ್ಲರೂ ಪುರುಷರು ಎಂದು ತಿಳಿದು ಬಂದಿದೆ.

ಭಾನುವಾರ, ಮೃತ ಜೈರಂ ಎಂಬುವರ ಅಂತ್ಯಕ್ರಿಯೆಗಾಗಿ ಅವರ ಸಂಬಂಧಿಕರು ಮುರಾದ್‌ನಗರ ಸ್ಮಶಾನಕ್ಕೆ ಆಗಮಿಸಿದ್ದರು. ನಿಖರವಾಗಿ ಅದೇ ಸಮಯದಲ್ಲಿ ಮಳೆ ಬರುತ್ತಿದ್ದಂತೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಕೆಳಗೆ ಹೋಗಿದ್ದಾರೆ. ಈ ಸಮಯದಲ್ಲಿ ಕಟ್ಟಡದ ಮೇಲ್ಚಾವಣಿ (ರೂಫ್ ಕುಸಿದಿದೆ) ಹಠಾತ್ ಕುಸಿತದಿಂದಾಗಿ ಅನೇಕ ಜನರು ಅವಶೇಷಗಳ ಕೆಳಗೆ ಸಿಲುಕಿಕೊಂಡು ಈವರೆಗೆ 25 ಜನರು ಸಾವನ್ನಪ್ಪಿದ್ದು ಇನ್ನು ಕೆಲವರಿಗೆ ಗಂಭೀರ ಗಾಯಗಳಾಗಿವೆ.

ಮೂವರ ಬಂಧನ:

Vijayaprabha Mobile App free

ಈ ಅಪಘಾತದಲ್ಲಿ ಈವರೆಗೆ 25 ಜನರು ಸಾವನ್ನಪ್ಪಿದ್ದು ಇನ್ನು ಹಲವರಿಗೆ ಗಂಭೀರ ಗಾಯಗಳಾಗಿದ್ದು, ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದು, ಗಾಯಾಳುಗಳನ್ನು ಹತ್ತಿರದ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಈ ಘಟನೆ (ಉತ್ತರ ಪ್ರದೇಶ) ಕುರಿತು ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕಿರಿಯ ಎಂಜಿನಿಯರ್ ಸೇರಿದಂತೆ ಮೂವರನ್ನು ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಕುಟುಂಬಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ತಲಾ 2 ಲಕ್ಷ ರೂ. ಘೋಷಣೆ

ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಮೃತ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಘೋಷಣೆ ಮಾಡಿದ್ದೂ,ಈ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.