PAN Card | ಆಧಾರ್ ಕಾರ್ಡ್‌ಗೆ ಪ್ಯಾನ್ ಲಿಂಕ್ ಡಿ.31ಕ್ಕೆ ಡೆಡ್‌ಲೈನ್

ಹೊಸದಿಲ್ಲಿ: ಆಧಾರ್ ಕಾರ್ಡ್ (Aadhaar card)  ಜತೆ ಪ್ಯಾನ್ ಕಾರ್ಡ್ (PAN Card)  ಲಿಂಕ್ (Link) ಮಾಡುವುದು ಕಡ್ಡಾಯ. ಹೀಗೆ ಮಾಡದಿದ್ದರೆ ಜನವರಿ 1ರಿಂದ ಪ್ಯಾನ್ ಕಾರ್ಡ್ ಅನೂರ್ಜಿತ ಗೊಳ್ಳುತ್ತದೆ. ಲಿಂಕ್ ಮಾಡುವುದಕ್ಕೆ ಡಿಸೆಂಬರ್…

Aadhaar Link with PAN Card

ಹೊಸದಿಲ್ಲಿ: ಆಧಾರ್ ಕಾರ್ಡ್ (Aadhaar card)  ಜತೆ ಪ್ಯಾನ್ ಕಾರ್ಡ್ (PAN Card)  ಲಿಂಕ್ (Link) ಮಾಡುವುದು ಕಡ್ಡಾಯ. ಹೀಗೆ ಮಾಡದಿದ್ದರೆ ಜನವರಿ 1ರಿಂದ ಪ್ಯಾನ್ ಕಾರ್ಡ್ ಅನೂರ್ಜಿತ ಗೊಳ್ಳುತ್ತದೆ. ಲಿಂಕ್ ಮಾಡುವುದಕ್ಕೆ ಡಿಸೆಂಬರ್ 31ರ ತನಕ ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೇಳಿದೆ.

ಡಿಸೆಂಬರ್ 31ರ ನಂತರ ಲಿಂಕ್ ಮಾಡಿದರೆ ಒಂದು ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಪರ್ಮನೆಂಟ್ ಅಕೌಂಟ್ ನಂಬರ್(ಪ್ಯಾನ್) ಎಂಬುದು ಪ್ರತಿ ವ್ಯಕ್ತಿಗೂ ಆದಾಯ ತೆರಿಗೆ ಇಲಾಖೆ ನೀಡುವ ಗುರುತಿನ ಸಂಖ್ಯೆಯಾಗಿದೆ.

ಇದನ್ನು ತೆರಿಗೆ ಉದ್ದೇಶ ಕ್ಕಾಗಿ ನೀಡಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ದೊಡ್ಡ ಮೊತ್ತದ ನಗದು ಠೇವಣಿ ತನಕ ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಡ್ಡಾಯ.

Vijayaprabha Mobile App free

ಇದು ಇಲ್ಲದಿದ್ದರೆ ಐಟಿ ರಿಟರ್ನ್ಸ್ ಸಲ್ಲಿಸಲು ಆಗುವುದಿಲ್ಲಘಿ.ಹೊಸ ಖಾತೆ ತೆರೆಯಲು ಆಗುವುದಿಲ್ಲ. ಟ್ಯಾಕ್ಸ್ ರೀಫಂಡ್ ಕೂಡ ಆಗುವುದಿಲ್ಲಘಿ. ಷೇರು ಪೇಟೆ, ಮ್ಯುಚುವಲ್ ಫಂಡ್ ವ್ಯವಹಾರ ಮಾಡಲು ತೊಂದರೆಯಾಗುತ್ತದೆ.

ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್‌ನಲ್ಲಿ ಲಿಂಕ್ ಪ್ರಕ್ರಿಯೆಯನ್ನು ಸುಲಭವಾಗಿ ಮುಗಿಸಬಹುದು ಎಂದು ತೆರಿಗೆ ತಜ್ಞರು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.