ಬೆಂಗಳೂರು: ನಟ ದರ್ಶನ್ ಮತ್ತು ಅವರ ಸ್ನೇಹಿತರು ಸೇರಿ ದಲಿತ ಸರ್ವರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಸಂಬಂಧಿಸಿದಂತೆ, ಸಂದೇಶ್ ಪ್ರಿನ್ಸ್ ಹೋಟೆಲ್ ನ ಸರ್ವರ್ ಊಟ ತಡವಾಗಿ ತಂದಿದ್ದಕ್ಕೆ ಬೈದಿದ್ದೆ ಎಂದು ನಟ ದರ್ಶನ್ ಒಪ್ಪಿಕೊಂಡಿದ್ದಾರೆ.
ಹೌದು, ಕುರಿತು ಪ್ರತಿಕ್ರಿಯಿಸಿರುವ ನಟ ದರ್ಶನ್, ಈ ಪ್ರಕರಣ 4 ದಿನದ ಹಿಂದಿನದಲ್ಲ. ಪ್ರಕರಣದಲ್ಲಿ ಇಂದ್ರಜಿತ್ ಜೊತೆ ಮತ್ತಷ್ಟು ಮಂದಿ ಹುಟ್ಟಿಕೊಳ್ಳಬಹುದು. ಇದರಲ್ಲಿ ಜಾತಿಯನ್ನೂ ತೆಗೆಯುತ್ತಿದ್ದಾರೆ. ನನ್ನ ಮತ್ತು ಸಂದೇಶ್ ನಡುವೆ 1000 ಗಲಾಟೆಗಳಿವೆ. ಎದುರಿನವರು ಸರಿಯಾಗಿದ್ದರೆ ನಮ್ಮ ಪ್ರತಿಕ್ರಿಯೆಯೂ ಸರಿಯಾಗಿರುತ್ತದೆ. ಇಂದ್ರಜಿತ್ ತುಂಬಾ ದೊಡ್ಡ ತನಿಖಾ ಪತ್ರಕರ್ತರು, ಏನು ಮಾಡುತ್ತಾರೋ ಮಾಡಲಿ ಬಿಡಿ ಎಂದು ದರ್ಶನ್ ವ್ಯಂಗ್ಯವಾಡಿದರು.