ಬೆಂಗಳೂರು: ರಾಜ್ಯದ ಜನರಿಗೆ ಮತ್ತೆ ವಿದ್ಯುತ್ ಬರೇ ನೀಡಲು KERC ಮುಂದಾಗಿದ್ದು, ರಾಜ್ಯದಲ್ಲಿ ಕಳೆದ 5 ತಿಂಗಳಲ್ಲಿ ಮೂರನೇ ಬಾರಿಗೆ ಮತ್ತೆ ವಿದ್ಯುತ್ ಬಿಲ್ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಸಂಬಂಧ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಬೆಸ್ಕಾಂ ಪ್ರತಿ ಯೂನಿಟ್ಗೆ ₹1.39, ಮೆಸ್ಕಾಂ ₹1.69, ಹೆಸ್ಕಾಂ ₹83 ಪೈಸೆ, ಸೆಸ್ಕ್ ₹1.56 ಮತ್ತು ಜೆಸ್ಕಾಂ ₹1.31 ಏರಿಕೆ ಬಗ್ಗೆ KERC ಪ್ರಸ್ತಾವನೆಯಲ್ಲಿ ಉಲ್ಲೇಖವಾಗಿದೆ.
ಕಳೆದ 2 ತ್ರೈಮಾಸಿಕಗಳಲ್ಲಿ ರಾಜ್ಯದ ಎಸ್ಕಾಂಗಳಿಗೆ ವಿವಿಧ ಕಾರಣಗಳಿಗೆ ಒಟ್ಟು ₹3,556 ಕೋಟಿ ನಷ್ಟವಾಗಿದೆ ಎನ್ನಲಾಗಿದ್ದು ಇದನ್ನು ಸರಿದೂಗಿಸಲು KERC ವಿದ್ಯುತ್ ಬಿಲ್ ಏರಿಕೆ ಮಾಡುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಇನ್ನೂ ಸರ್ಕಾರಕ್ಕೆ KERC ಸಲ್ಲಿಸಿರುವ ಪ್ರಸ್ತಾವನೆ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿದ್ದು, ಆಕ್ಷೇಪಣೆ ಅವಧಿ ಮುಕ್ತಾಯದ ಬಳಿಕ ವಿದ್ಯುತ್ ದರ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.




