ರೈತ ಸುರಕ್ಷಾ ಹಾಗೂ ‘ಪಿಎಂ ಫಸಲ್ ಬಿಮಾ ಯೋಜನೆ’ಯಡಿಯಲ್ಲಿ ರಾಜ್ಯ ಕೃಷಿ ಇಲಾಖೆ ಮುಂಗಾರು ಬೆಳೆ ವಿಮೆ ಮಾಡಿಸಿರುವ ರೈತರ ಖಾತೆಗೆ ಪ್ರಸಕ್ತ ಸಾಲಿನಲ್ಲೇ ವಿಮಾ ಹಣ ಜಮೆ ಮಾಡುತ್ತಿದೆ.
ಇದನ್ನು ಓದಿ: ಡಬಲ್ ಧಮಾಕಾ..ನಿಮ್ಮ ಖಾತೆಗೆ ಶೀಘ್ರ ₹4,000..!
ಹೌದು, ಕೃಷಿ ಇಲಾಖೆಯು ಪ್ರಸಕ್ತ ವರ್ಷ 2022-23 ನೇ ಸಾಲಿನ ಮುಂಗಾರು ಬೆಳೆಗಳ ವಿಮಾ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡುತ್ತಿದ್ದು, ಈ ಮೂಲಕ ವಿಮೆಗಾಗಿ ಒಂದು ವರ್ಷ ಕಾಯಬೇಕಿದ್ದ ರೈತರಿಗೆ ಸಿಹಿಸುದ್ದಿ ಸಿಕ್ಕಿದೆ.
ಇದನ್ನು ಓದಿ: ಅನ್ನದಾತರೇ: ಈ ರೀತಿ ಮಾಡಿದ್ರೆ ನಿಮ್ಮ ಖಾತೆ ಸೇರುತ್ತೆ ಬರೋಬ್ಬರಿ 42 ಸಾವಿರ; ಸರ್ಕಾರದ ಈ ಹಣವನ್ನು ನಿಮ್ಮದಾಗಿಸಿಕೊಳ್ಳಿ!
ಇನ್ನು, 10.54 ಲಕ್ಷ ರೈತರಿಗೆ 973.91 ಕೋಟಿ ರೂ ನಿಗದಿಪಡಿಸಲಾಗಿದ್ದು, ಈಗಾಗಲೇ 5.59 ಲಕ್ಷ ರೈತರಿಗೆ 297.93 ಕೋಟಿ ರೂಗಳನ್ನು ಖಾತೆಗಳಿಗೆ ಡೆಪಾಸಿಟ್ ಮಾಡಲಾಗಿದೆ. ಈ ಹಿಂದೆ ಬೆಳೆ ವಿಮೆ ಮೊತ್ತ ವರ್ಷ ಕಳೆದ ಮೇಲೆ ರೈತರಿಗೆ ಸೇರುತ್ತಿತ್ತು. ಆದರೆ ಈಗ ವಿಮೆ ಮಾಡಿದ ವರ್ಷದಲ್ಲಿಯೇ ಪಾವತಿಯಾಗಬೇಕು ಎಂದು ಸರ್ಕಾರ ವಿಮಾ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್