ನವದೆಹಲಿ: ಹೊಸ ಕೃಷಿ ಕಾಯ್ದೆಗಳ ಮತ್ತು ರೈತರ ಪ್ರತಿಭಟನೆ ಕುರಿತು ಅಮೆರಿಕಾದ ಪಾಪ್ ಗಾಯಕಿ ರಿಹಾನಾ,ಸ್ವೀಡನ್ ಪರಿಸರವಾದಿ ಗ್ರೇಟಾ ತನ್‌ಬರ್ಗ್ ಟ್ವೀಟ್ ಮಾಡಿದ ನಂತರ ಮಾಜಿ ಕ್ರಿಕೆಟರ್ ಸಚಿನ್ ತೆಂಡುಲ್ಕರ್ ಸೇರಿದಂತೆ ಭಾರತದ ಸೆಲೆಬ್ರಿಟಿಗಳೆಲ್ಲ ಒಟ್ಟಾಗಿ ವಿದೇಶಿಯರ ಅಪಪ್ರಚಾರದ ವಿರುದ್ಧ ಟ್ವೀಟ್ ಮಾಡಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ, ಭಾರತ ಸರ್ಕಾರವು ವಿದೇಶಿಯರಿಗೆ ದೇಶದ ಸೆಲೆಬ್ರೆಟಿಗಳು ಪ್ರತಿಕ್ರಿಯಿಸುವಂತೆ ಮಾಡುತ್ತಿರುವುದು ನಿಜಕ್ಕೂ ಮುಜುಗರವನ್ನುಂಟು ಮಾಡುತ್ತಿದೆ. ಭಾರತದ ಜಾಗತಿಕ ಚಿತ್ರಣಕ್ಕೆ ಉಂಟಾಗಿರುವ ಹಾನಿಯನ್ನು ಕ್ರಿಕೆಟಿಗರ ಟ್ವೀಟ್‌ನಿಂದ ಸರಿಪಡಿಸಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಹರಿಹಾಯ್ದಿದ್ದಾರೆ.
For GoI to get Indian celebrities to react to Western ones is embarrassing. The damage done to India’s global image by GoI’s obduracy &undemocratic behaviour can’t be remedied by a cricketer’s tweets. Withdraw the farm laws &discuss solutions w/farmers &you’ll get #IndiaTogether.
— Shashi Tharoor (@ShashiTharoor) February 3, 2021




