ಪ್ರಪಂಚದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಹೊಡೆತ ಕೊಟ್ಟಿರುವ ಕೊರೋನಾ ಸೋಂಕು, ಜನರ ಅರೋಗ್ಯ ಸಮಸ್ಯೆಯಲ್ಲೂ ದೊಡ್ಡ ಪರಿಣಾಮ ಬೀರಿದ್ದು, ಕರೋನ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಹೃದಯದ ಸಮಸ್ಯೆ ಮತ್ತು ಮಧುಮೇಹದಂತಹ ಸಮಸ್ಯೆ ಕಾಣಿಸಿಕೊಂಡಿವೆಯಂತೆ.
ಹೌದು, ಕೊರೋನಾ ಸೋಂಕಿನ 2ನೇ ಅಲೆ ಇಳಿದ ನಂತರ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಹೃದಯ, ಮಧುಮೇಹ ತಪಾಸಣೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ಸಮಸ್ಯೆಗೆ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಆಗ 15-20% ರವರೆಗೆ ಅಧಿಕವಾಗಿತ್ತು. ಎನ್‌ಸಿಡಿ ಕ್ಲಿನಿಕ್‌ಗಳಲ್ಲಿ 2020–21ರಲ್ಲಿ ತಪಾಸಣೆಗೆ ಒಳಪಟ್ಟ 20.94 ಲಕ್ಷ ಮಂದಿಯಲ್ಲಿ 49,392 ಜನರಿಗೆ ಮಧುಮೇಹ ಇರುವುದು ಪತ್ತೆಯಾಗಿತ್ತು.
ಚಿಕಿತ್ಸೆಗೆ ಬರುವವರ ಸಂಖ್ಯೆ ಆಗ 15-20% ರವರೆಗೆ ಅಧಿಕವಾಗಿತ್ತು. ಎನ್‌ಸಿಡಿ ಕ್ಲಿನಿಕ್‌ಗಳಲ್ಲಿ 2020–21ರಲ್ಲಿ ತಪಾಸಣೆಗೆ ಒಳಪಟ್ಟ 20.94 ಲಕ್ಷ ಮಂದಿಯಲ್ಲಿ 49,392 ಜನರಿಗೆ ಮಧುಮೇಹ ಇರುವುದು ಪತ್ತೆಯಾಗಿತ್ತು ಎನ್ನಲಾಗಿದೆ.