ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ: ಶಾಸಕ ರೇಣುಕಾಚಾರ್ಯರಿಂದ ವಿವಾದಾತ್ಮಕ ಹೇಳಿಕೆ

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಹೋಗಿ, ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ ಎಂದು ಬಿಜೆಪಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯಾ ಅವರು ವಿಚಾದಾತ್ಮಕ ಹೇಳಿಕೆ ನೀಡಿದ್ದಾರೆ.…

mp renukacharya vijayaprabha

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಹೋಗಿ, ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ ಎಂದು ಬಿಜೆಪಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯಾ ಅವರು ವಿಚಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಪಿ. ರೇಣುಕಾಚಾರ್ಯಾ ಅವರು, ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುವುದಲ್ಲದೆ, ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉಡುಪು ಹಾಕುವುದು ಮಹಿಳೆಯರ ಹಕ್ಕು ಎಂಬ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ರೇಣುಕಾಚಾರ್ಯ ಅವರು, ಪ್ರಿಯಾಂಕಾ ಗಾಂಧಿ ಕೀಳುಮಟ್ಟದ ಹೇಳಿಕೆ ನೀಡಿದ್ದು, ಅವರು ದೇಶದ ಕ್ಷಮೆ ಕೇಳಬೇಕು. ಪ್ರಿಯಾಂಕಾ ಗಾಂಧಿ ತಾಯಿ ಹೇಳಿ ಕೇಳಿ ಇಟಲಿಯವರು, ಅವರು ಮದುವೆಯಾಗಿರೋದು ವೈಯಕ್ತಿಕ ವಿಚಾರ ಮಹಿಳೆಯರ ಬಟ್ಟೆಯಿಂದ ಕೆಲವರು ಉದ್ವೇಗಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

Vijayaprabha Mobile App free

ಹಿಜಾಬ್ ವಿವಾದದ ಹಿಂದೆ ಎಸ್ ಡಿಪಿಐ ಪಿಎಫ್ ಐ ಸಂಘಟನೆ ಕೈವಾಡವಿದ್ದು, ನಾವು ರಾಜಕಾರಣದಲ್ಲಿ ಕೇಸರೀಕರಣ ಮಾಡುತ್ತೇವೆ, ಶಿಕ್ಷಣದಲ್ಲಿ ಕೇಸರಿಕರಣ ಮಾಡಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇನ್ನು, ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತೆ ಎಂಬ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚತ್ತ ರೇಣುಕಾಚಾರ್ಯ ಕ್ಷಮೆಯಚಿಸಿದ್ದು, ನನ್ನ ಹೇಳಿಕೆಯಿಂದ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಉದ್ದೇಶ ಮಹಿಳೆಯರ ನೋವಿಸುವುದಾಗಿರಲಿಲ್ಲ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.