ಬೆಳಗಾವಿ: ಉಪ ಚುನಾವಣೆ ಹಿನ್ನೆಲೆ ಇಂದು ಬೆಳಗಾವಿ ನಗರಕ್ಕೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದಿಂದ ಹೋಟೆಲ್ ಗೆ ತೆರಳುತ್ತಿದ್ದ ವೇಳೆ ಡಿಕೆಶಿ ಸ್ವಾಗತಿಸಲು ಬಂದಿದ್ದ ಸ್ಥಳೀಯ ಕಾಂಗ್ರೆಸ್ ನಾಯಕರ & ಬೆಂಗಾವಲು ವಾಹನದ ಮೇಲೆ ಕಲ್ಲೆಸೆತ ನಡೆದಿದ್ದು, ಜಾರಕಿಹೊಳಿ ಬೆಂಬಲಿಗರನ್ನು ತಡೆಯಲು ಪೊಲೀಸರು ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆಶಿ ತೆರಳುತ್ತಿದ್ದ ಕಾರಿನ ಗಾಜು ಪುಡಿಪುಡಿ:
ಇನ್ನು ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ ನಗರಕ್ಕೆ ಪ್ರವೇಶಿಸುವಾಗ ದ್ವಾರದಲ್ಲಿಯೇ ಶಾಸಕ ರಮೇಶ್ ಜಾರಕಿಹೊಳಿ ಅವರ ಬೆಂಬಲಿಗರು ಡಿಕೆಶಿ ಕಾರನ್ನು ತಡೆದಿದ್ದಾರೆ. ಈ ವೇಳೆ ಕಾರಿಗೆ ಗುದ್ದಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಘಟನೆಯಲ್ಲಿ ಡಿಕೆಶಿ ತೆರಳುತ್ತಿದ್ದ ಕಾರಿನ ಗಾಜು ಪುಡಿಪುಡಿಯಾಗಿದೆ.