ರಾಜ್ಯದಲ್ಲಿ ಮಳೆ ಅಬ್ಬರ ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ. ಇಂದಿನಿಂದ ಇನ್ನೂ 3 ದಿನ(ಸೆ.11)ಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಇನ್ನು ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ವರ್ಷಧಾರೆ ಸುರಿಯಲಿದ್ದು, ಇಲ್ಲೂ ಕಿತ್ತಳೆ ಅಲರ್ಟ್ ಘೋಷಿಸಲಾಗಿದ್ದು, ಕರ್ನಾಟಕದ 10 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ಅಲರ್ಟ್ ಘೋಷಿಸಲಾಗಿದೆ.
ವಿವಿಧ ನಗರಗಳ ಹವಾಮಾನ ವರದಿ:
ಬೆಂಗಳೂರು: 22-20, ಮಂಗಳೂರು: 27-24, ಶಿವಮೊಗ್ಗ: 27-22, ಬೆಳಗಾವಿ: 27-22, ಮೈಸೂರು: 28-21, ಮಂಡ್ಯ: 28-21, ಕೊಡಗು: 22-18, ರಾಮನಗರ: 27-21, ಹಾಸನ: 24-19, ಚಾಮರಾಜನಗರ: 28-21, ಚಿಕ್ಕಬಳ್ಳಾಪುರ: 27-20, ಕೋಲಾರ: 28-21, ತುಮಕೂರು: 27-21, ಉಡುಪಿ: 27-25, ಕಾರವಾರ: 27-26, ಚಿಕ್ಕಮಗಳೂರು: 24-19, ದಾವಣಗೆರೆ: 27-22, ಚಿತ್ರದುರ್ಗ: 27-21, ಹಾವೇರಿ: 28-22, ಬಳ್ಳಾರಿ: 29-23, ಗದಗ: 27-22, ಕೊಪ್ಪಳ: 28-23, ರಾಯಚೂರು: 29-23, ಯಾದಗಿರಿ: 29-23, ವಿಜಯಪುರ: 28-22, ಬೀದರ್: 27-21, ಕಲಬುರಗಿ: 28-23, ಬಾಗಲಕೋಟೆ: 28-23 ಡಿಗ್ರಿ ಸೆಲ್ಸಿಯಸ್ ಇರಲಿದೆ.