ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ ಚಂದಾದಾರರಿಗೆ ನೆಮ್ಮದಿ ಸುದ್ದಿ ನೀಡಿದ್ದು, ಯುಎಎನ್ ಸಂಖ್ಯೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡುವ ದಿನಾಂಕವನ್ನು ವಿಸ್ತರಿಸಿದೆ.
ಹೌದು, ಪಿಎಫ್ ಖಾತೆದಾರರು 2021ರ ಸೆಪ್ಟೆಂಬರ್ 1ರೊಳಗೆ ಈ ಕೆಲಸವನ್ನು ಮಾಡಬಹುದಾಗಿದ್ದು, ಈ ಬಗ್ಗೆ ಇಪಿಎಫ್ಒ ಸುತ್ತೋಲೆ ಹೊರಡಿಸಿದ್ದು, ಆಧಾರ್ ಸಂಖ್ಯೆಯೊಂದಿಗೆ ನೌಕರರ ಭವಿಷ್ಯ ನಿಧಿಯ ಯುಎಎನ್ ಪರಿಶೀಲಿಸಿ ಪಿಎಫ್ ರಿಟರ್ನ್ಸ್ ಸಲ್ಲಿಸುವ ಆದೇಶದ ಅನುಷ್ಠಾನವನ್ನು ಸೆ.1ರವರೆಗೆ ಮುಂದೂಡಲಾಗಿದೆ ಎಂದು ತಿಳಿಸಿದೆ.
ಪಿಎಫ್-ಆಧಾರ್ ಲಿಂಕ್ ಮಾಡುವುದು ಹೇಗೆ?:
>ಮೊದಲು ಇಪಿಎಫ್ ವೆಬ್ಸೈಟ್ EPFO Member e-SEWA ಗೆ ಭೇಟಿ ನೀಡಿ. ಅಲ್ಲಿಂದ ನಿಮ್ಮ ಯುಎಎನ್ ಸಂಖ್ಯೆ & ಪಾಸ್ವರ್ಡ್ ನಮೂದಿಸಿ ಲಾಗಿನ್ ಮಾಡಿ.
>’ಕೆವೈಸಿ’ ಆಯ್ಕೆಮಾಡಿ, ‘ಮ್ಯಾನೇಜ್’ ಮೇಲೆ ಕ್ಲಿಕ್ ಮಾಡಿ.
>’ಆಡ್ ಕೆವೈಸಿ’ಯಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಸಂಖ್ಯೆಯನ್ನು ಸಲ್ಲಿಸಿ. ಅಲ್ಲಿಂದ ‘ಬಾಕಿ ಉಳಿದಿರುವ ಕೆವೈಸಿ ಟ್ಯಾಬ್’ನಲ್ಲಿ ನಿಮ್ಮ ವಿವರಗಳನ್ನು ಕಾಣುವಿರಿ.
>ಇಪಿಎಫ್ಒ ಅನುಮೋದಿಸಿದ ನಂತರ ನಿಮ್ಮ ಆಧಾರ್ ಮಾಹಿತಿಯು ‘ಅನುಮೋದಿತ ಕೆವೈಸಿ’ ಟ್ಯಾಬ್ನಲ್ಲಿ ಕಾಣಿಸಿಕೊಳ್ಳುತ್ತದೆ.