ಬೀದರ್ : ಸದ್ಯಕ್ಕೆ ರಾಜ್ಯದಲ್ಲಿ ಲಾಕ್ ಡೌನ್ ಹೆರುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಲಾಕ್ ಡೌನ್ ಹೇರುವಂತೆ ತಾಂತ್ರಿಕ ಸಲಹಾ ಸಮಿತಿ ಕೂಡ ಸಲಹೆ ನೀಡಿಲ್ಲ. ಸಲಹಾ ಸಮಿತಿಯಲ್ಲಿ ನಾನು ಇದ್ದೇನೆ, ಆ ರೀತಿ ಸೂಚಿಸಿಲ್ಲ ಎಂದರು.
ಬಳಿಕ ಸಚಿವ ಡಾ.ಸುಧಾಕರ್ ಅವರು ಪ್ರಕರಣ ಹೆಚ್ಚಾದರೆ ಲಾಕ್ ಡೌನ್ ಅನಿವಾರ್ಯ ಎಂದಿದ್ದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ತಪ್ಪುಗಳನ್ನು ಹೇಳಬೇಡಿ ಎಂದು ಎಚ್ಚರಿಕೆ ಕೊಟ್ಟರು.
ಸಭೆಗೆ ಕರೆಯುತ್ತೇವೆ, ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು: ಸಿಎಂ
ಇನ್ನು ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಏನೇನು ಮಾಡಬೇಕೆಂದು ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸುತ್ತೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದು, ಸೋಂಕು ತೊಡೆದು ಹಾಕಲು ಜನರು ಸಹಕಾರ ನೀಡಬೇಕು. ಇದನ್ನು ಮರೆತರೆ ಅನಾಹುತ ಆಗಲಿದೆ.
ಸಭೆಗೆ ಎಲ್ಲಾ ಪಕ್ಷಗಳ ಪ್ರಮುಖ ನಾಯಕರಿಗೆ ಆಹ್ವಾನ ನೀಡುತ್ತೇವೆ. ಬರುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟದ್ದು ಎಂದಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ನೇತೃತ್ವದ ಸರ್ವಪಕ್ಷ ಸಭೆಗೆ ನಾನು ತೆರಳಲ್ಲ ಎಂದಿದ್ದರು.