ಬೆಂಗಳೂರು: ವಿಶ್ವದಾತ್ಯಂತ ಕರೋನ ಸೋಂಕು ಹರಡಿದ ಹಿನ್ನಲೆ ದೇಶದ ಎಲ್ಲಾ ಕಡೆ ಶಾಲಾ ಕಾಲೇಜುಗಳು, ಸಿನಿಮಾ ಟೆಯೇಟರ್, ಫಬ್ ಹಾಗು ರೆಸ್ಟೋರೆಂಟ್ ಗಳನ್ನು ಬಂದ್ ಮಾಡಲಾಗಿತ್ತು. ಈಗ ದೇಶದಲ್ಲಿ ಕರೋನ ಸೋಂಕು ತಗ್ಗುತ್ತಿರುವ ಹಿನ್ನಲೆ, ಕೇಂದ್ರ ಸರ್ಕಾರದ ಕರೋನ ಮಾರ್ಗಸೂಚಿ ಅನ್ವಯ ಶಾಲಾ ಕಾಲೇಜುಗಳನ್ನು ತೆರೆಯಲು ಆದೇಶ ಹೊರಡಿಸಿತ್ತು.
ಸರ್ಕಾರದ ಆದೇಶದ ಮೇರೆಗೆ ರಾಜ್ಯದಲ್ಲಿ ಪದವಿ, ಎಂಜಿನಿಯರಿಂಗ್ ಹಾಗು ಡಿಪ್ಲೊಮಾ ಕಾಲೇಜುಗಳ ತರಗತಿಗಳನ್ನು ಇಂದಿನಿಂದ ಆರಂಭವಾಗುತ್ತಿದ್ದಾವೆ.
ಅಂತಿಮ ವರ್ಷದ ಯುಜಿ ಹಾಗು ಪಿಜಿ ವಿದ್ಯಾರ್ಥಿಗಳಿಗೆ ಮಾತ್ರ ನೇರ ತರಗತಿಗಳು ನಡೆಯಲಿವೆ. ಯುಜಿಸಿ ಮಾರ್ಗಸೂಚಿ ಅನ್ವಯ ಕಾಲೇಜುಗಳನ್ನು ಪುನರಾರಂಭಿಸಲು ಉನ್ನತ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಜೊತೆಗೆ ಪೋಷಕರ ಒಪ್ಪಿಗೆ ಪತ್ರವನ್ನು ಕೂಡ ತರಬೇಕು.
ಇನ್ನು ಬೋಧಕರು ಹಾಗು ವಿದ್ಯಾರ್ಥಿಗಳು ಕಡ್ಡಾಯವಾಗಿ 3 ದಿನದ ಮುಂಚಿತವಾಗಿಯೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ರಿಪೋರ್ಟ್ ನೆಗೆಟಿವ್ ಇದ್ದಲ್ಲಿ ಮಾತ್ರ ಕಾಲೇಜಿಗೆ ಬರಬಹುದು ಎಂದು ಸೂಚನೆ ನೀಡಿವೆ.