ನವದೆಹಲಿ: ಕೊರೊನಾ ಕಾರಣದಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಂದ ಯಾವುದೇ ಪರೀಕ್ಷೆ ಮತ್ತು ನೊಂದಣಿ ಶುಲ್ಕ ಪಡೆಯಲಾಗುವುದಿಲ್ಲ ಎಂದು ಕೇಂದ್ರಿಯ ಫ್ರೌಡಶಿಕ್ಷಣ (CBSE) ಮಂಡಳಿ ತಿಳಿಸಿದೆ.
ಹೌದು, ಹಲವಾರು ವಿದ್ಯಾರ್ಥಿಗಳು ಕೊರೊನಾ ಕಾರಣದಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರಿಯ ಫ್ರೌಡಶಿಕ್ಷಣ (ಸಿಬಿಎಸ್‍ಸಿ) ತಿಳಿಸಿದೆ. ಆದೇಶದ ಪ್ರಕಾರ 2021-22ರ ಪರೀಕ್ಷಾ ಶುಲ್ಕ ಅಥವಾ ನೋಂದಣಿ ಶುಲ್ಕವನ್ನು ಮಂಡಳಿ ವಿಧಿಸುವುದಿಲ್ಲ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.