kidney problem: ಅತಿಯಾಗಿ ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಬಿಯರ್ ದೇಹದಲ್ಲಿನ ನೀರಿನಂಶವನ್ನು ಕಡಿಮೆ ಮಾಡುತ್ತದೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಅಡಚಣೆಯಾಗುತ್ತದೆ ಎಂದು ತಿಳಿಸಲಾಗಿದೆ
ಬಿಯರ್ ಕುಡಿಯುವವರಲ್ಲಿ ಕಿಡ್ನಿ ಸ್ಟೋನ್ ಗೆ ಕಾರಣವಾಗುವ ಆಕ್ಸಲೇಟ್ ಗಳು ಅಧಿಕವಾಗಿರುತ್ತದೆ. ಬಿಯರ್ ಮೂತ್ರದಲ್ಲಿ ಕ್ಯಾಲ್ಸಿಯಂ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಕಲ್ಲುಗಳು ಬೆಳೆಯಲು ಕಾರಣವಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
ಕಿಡ್ನಿ ಸಮಸ್ಯೆ ಇದ್ದರೆ ದೇಹದಲ್ಲಿ ಯಾವ ಲಕ್ಷಣಗಳು ಕಂಡುಬರುತ್ತವೆ?
ರಾಷ್ಟ್ರೀಯ ಕಿಡ್ನಿ ಫೌಂಡೇಶನ್‌ನ ಮುಖ್ಯ ವೈದ್ಯಾಧಿಕಾರಿ ಡಾ.ಜೋಸೆಫ್ ವಾಸಲೊಟ್ಟಿ ಪ್ರಕಾರ, ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಶೇ. 10ರಷ್ಟು ಜನರಿಗೆ ಮಾತ್ರ ಸಮಸ್ಯೆಯ ಬಗ್ಗೆ ತಿಳಿದಿದೆ.
ಅತಿಯಾದ ಆಯಾಸ, ಹಸಿವಿನ ಕೊರತೆ, ಅತಿಯಾದ ಮೂತ್ರ ವಿಸರ್ಜನೆ, ಕಣ್ಣುಗಳ ಬಳಿ ಊತವು ಮೂತ್ರಪಿಂಡದ ಸಮಸ್ಯೆಗಳಿಗೆ ಸಂಬಂಧಿಸಿ ದೇಹದಲ್ಲಿ ಗೋಚರಿಸುವ ಲಕ್ಷಣಗಳಾಗಿವೆ.
ಇದರೊಂದಿಗೆ, ಮೂತ್ರದಲ್ಲಿ ರಕ್ತದ ಅಂಶ ಕಂಡು ಬರುವುದು, ನೊರೆಯುಕ್ತ ಮೂತ್ರ, ಮಾಂಸಖಂಡಗಳ ಸೆಳೆತವೂ ಕಿಡ್ನಿ ಸಮಸ್ಯೆಯ ಲಕ್ಷಣಗಳಾಗಿವೆ.
https://vijayaprabha.com/distribution-of-eggs-and-bananas-to-children-by-the-state-education-department/