ಮುಂಬೈ: ವಾಂಖಡೆ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 14 ಆವೃತ್ತಿಯ 12 ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 45 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 189 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ತಾನ್ ರಾಯಲ್ಸ್ ತಂಡ, ಜೋಸ್ ಬಟ್ಲರ್ (49 ರನ್, 35 ಎಸೆತ), ಮನನ್ ವೋಹ್ರಾ ( 14 ರನ್, 11 ಎಸೆತ) ರಾಹುಲ್ ತೇವಟಿಯ (20 ರನ್, 15 ಎಸೆತ), ಉನಡ್ಕಟ್ (24 ರನ್, 17 ಎಸೆತ) ಅವರ ಆಟದ ನೆರವಿನಿಂದ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 143 ರನ್ ಗಳಿಸಿ 44 ರನ್ ಗಳ ಸೋಲನುಭವಿಸಿತು. ಇನ್ನು ಚೆನ್ನೈ ಪರ ಮೋಹಿನ್ ಅಲಿ 3, ಸ್ಯಾಮ್ ಕರಣ್ 2, ರವೀಂದ್ರ ಜಡೇಜಾ 2 ವಿಕೆಟ್, ಶಾರ್ದುಲ್ ಠಾಕೂರ್ ಹಾಗು ಬ್ರಾವೊ ತಲಾ 1 ವಿಕೆಟ್ ಪಡೆದರು.
ಇನ್ನು ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭಿಕ ಆಟಗಾರ ಫಾಫ್ ಡುಪ್ಲೆಸಿಸ್ (33 ರನ್, 17 ಎಸೆತ), ಮೋಹಿನ್ ಅಲಿ (26 ರನ್, 20 ಎಸೆತ), ಅಂಬಟಿ ರಾಯುಡು ( 27 ರನ್, 17 ಎಸೆತ), ಡ್ವೆನ್ ಬ್ರಾವೊ (20 ರನ್, 8 ಎಸೆತ ) ಆಟದ ನೆರವಿನಿಂದ ತಂಡವು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತು. ರಾಜಸ್ತಾನ್ ರಾಯಲ್ಸ್ ಪರ ಚೇತನ್ ಸಕಾರಿಯಾ 3, ಕ್ರಿಸ್ ಮಾರಿಸ್ 2, ಮುಸ್ತಫಿಜುರ್ ಹಾಗು ರಾಹುಲ್ ತೇವಟಿಯ ತಲಾ 1 ವಿಕೆಟ್ ಪಡೆದರು.
ಇನ್ನು ಚೆನ್ನೈ ತಂಡದ ಪರ ಆಲ್ರೌಂಡರ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದ ಮೋಹಿನ್ ಅಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.