Channapatna by-election result :ಚನ್ನಪಟ್ಟಣ, ಸಂಡೂರು & ಶಿಗ್ಗಾಂವಿ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಫಲಿತಾಂಶ ಕುತೂಹಲ ಕೆರಳಿಸಿದೆ.
ಭಾರೀ ಜಿದ್ದಾಜಿದ್ದಿನ ಚನ್ನಪಟ್ಟಣದಲ್ಲಿ JDSನ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ. ಹೀಗಾಗಿ JDS ಪಾಳಯದಲ್ಲಿ ರಣೋತ್ಸಾಹವಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಕೂಡ ಅದಮ್ಯ ಆತ್ಮವಿಶ್ವಾಸದಲ್ಲಿದ್ದಾರೆ. ನಾನೇ ಗೆಲ್ಲುತ್ತೇನೆ ಅಂತಿದ್ದಾರೆ. ನಾಳೆ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ.
Channapatna by-election : ಚನ್ನಪಟ್ಟಣದಲ್ಲಿ ಕೋಟಿ ಕೋಟಿ ಬೆಟ್ಟಿಂಗ್
ಇನ್ನು, ರಾಜ್ಯದ ಚನ್ನಪಟ್ಟಣ ಕ್ಷೇತ್ರದ ಮೇಲೆ ಈ ಬಾರಿ ಎಲ್ಲರ ಕಣ್ಣು ನೆಟ್ಟಿದೆ. ಇಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಸಿಪಿ ಯೋಗೇಶ್ವರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಕಳೆದೆರಡು ದಿನಗಳಲ್ಲಿ ಕೋಟಿ ಕೋಟಿ ಬೆಟ್ಟಿಂಗ್ ದಂಧೆ ನಡೆದಿದೆ.
ಹಲವೆಡೆ ನಗದು ಮಾತ್ರವಲ್ಲದೆ ಜಮೀನು, ಕಾರು, ಆಭರಣಗಳನ್ನೂ ಪಣಕ್ಕಿಟ್ಟಿದ್ದಾರೆ. ರಾಮನಗರ ಮಾತ್ರ ಅಲ್ಲ ಮದ್ದೂರು, ಮಂಡ್ಯದಲ್ಲೂ ಬೆಟ್ಟಿಂಗ್ ನಡೆದಿದೆ.