ತಿಕೋಟಾ : ತಿಕೋಟಾ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊನವಾಡದ ಖ್ಯಾತ ಪ್ರವಚನಕಾರರು, ಆದ್ಯಾತ್ಮವಾದಿಗಳಾದ ಪ ಪೂ ಬಾಬುರಾವ ಮಹಾರಾಜರನ್ನು ಹಾಗೂ ತಿಕೋಟಾದ ಪ್ರಸಿದ್ದ ವರ್ತಕರು, ಪಿ ಕೆ ಪಿ ಎಸ್ ನ ಮಾಜಿ ಕಾರ್ಯದರ್ಶಿಗಳು ಹಾಗೂ ಕನ್ನಡಾಭಿಮಾನಿಗಳಾದ ಶ್ರೀ ಸದಾಶಿವ ಮಂಗಸೂಳಿಯವರನ್ನು ಸಂಘಟನಾ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಯಿತು.
ಕನಮಡಿಯ ಸಾಮಾಜಿಕ ಚಿಂತಕರು, ಕನ್ನಡ ಅಭಿಮಾನಿಗಳು ಶ್ರೀ ಶರಣು ಅವಟಿ, ಕನಮಡಿಯ ಪ್ರಸಿದ್ಧ ನ್ಯಾಯವಾದಿಗಳು, ಸಾಮಾಜಿಕ ಚಿಂತಕರು, ಹೋರಾಟಗಾರರೂ ಆದ ಶ್ರೀ ಕೆಂಚಪ್ಪ ಪೂಜಾರಿಯವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿಗಳನ್ನಾಗಿ ಜಿಲ್ಲಾಧ್ಯಕ್ಷರಾದ ಶ್ರೀ ಹಾಷಿಂಪೀರ ವಾಲೀಕಾರ ಇವರ ಸಮ್ಮತಿಯೊಂದಿಗೆ ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಕೋಟಾ ತಾಲ್ಲೂಕು ಕ ಸಾ ಪ ಅಧ್ಯಕ್ಷರಾದ ಶ್ರೀ ಸಿದ್ರಾಮಯ್ಯ ಲಕ್ಕುಂಡಿಮಠ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment