ಕ್ರೂರತೆಯ ಆಧಾರದ ಮೇಲೆ ದಂಪತಿಗಳು ವಿಚ್ಛೇದನದ ಪ್ರಕರಣ ದಾಖಲು ಮಾಡಿಕೊಳ್ಳಬಹುದು. ಆದರೆ ನೀವು ಹೇಳುವ ವಿಷಯಗಳಿಂದ ನಿಮಗೆ ಸಹಿಸಲಾರದ ಕ್ರೂರತೆ ಆಗಿದೆ ಎನ್ನುವುದನ್ನು ನೀವು ನ್ಯಾಯಾಲಯದಲ್ಲಿ ಸಾಬೀತು ಮಾಡಬೇಕು.
ನೀವು ಹೇಳಿದ ವಿಷಯಗಳನ್ನೆಲ್ಲಾ ನ್ಯಾಯಾಲಯ ದೈನಂದಿನ ಜೀವನದ ಆಗುಹೋಗುಗಳು, ಏರುಪೇರುಗಳು ಎಂದು ನಿರ್ಧರಿಸಿದರೆ ನಿಮಗೆ ವಿಚ್ಛೇದನ ಸಿಗದೆಯೂ ಹೋಗಬಹುದು.
ವಾಟ್ಸಾಪ್ ಸಂದೇಶದ ಆಧಾರದ ಮೇಲೆ ಡಿವೋರ್ಸ್ ಪಡೆಯಬಹುದೇ?
ಪತ್ನಿಯ ಮೇಲೆ ಅನುಮಾನದ ಆಧಾರದ ಮೇಲೆ, ವಾಟ್ಸಾಪ್ ಮೆಸೇಜ್ ಮೇಲಿನ ಆಧಾರದಿಂದ ನೀವು ವಿಚ್ಛೇದನ ಪಡೆಯಲು ಆಗುವುದಿಲ್ಲ. ಬೇರೆ ವ್ಯಕ್ತಿಗಳ ಜತೆ ವಿವಾಹೇತರ ಸಂಬಂಧವಿದ್ದರೆ, ಅದರ ಬಗ್ಗೆ ಪುರಾವೆ ಇದ್ದರೆ ಕ್ರೂರತೆಯ ಅಂಶವಾಗಿ ವಿಚ್ಛೇದನ ಪಡೆಯಲು ಸಹಕಾರಿ ಆಗುತ್ತದೆ.
ಅನೈತಿಕ ಸಂಬಂಧವನ್ನು ಸಾಬೀತುಪಡಿಸುವುದು ಬಹಳ ಕಷ್ಟ. ಮುಂದಿನ ಜೀವನ ಚೆನ್ನಾಗಿ ನಡೆಯಬೇಕು ಎನ್ನುವವರಿದ್ದರೆ, ವಿವಾಹ ಸಂಧಾನಕಾರರ ಬಳಿ ಹೋಗಿ ಸಲಹೆ ಪಡೆಯಬಹುದು.