By-election results : ಕರ್ನಾಟಕ ಮಿನಿ ಸಮರದಲ್ಲಿ ಮತದಾನೋತ್ತರ ಸಮೀಕ್ಷೆಗಳು ಉಲ್ಟಾ ಆಗಿದ್ದು, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಮಾತ್ರ ಗೆಲ್ಲಲಿದೆ ಎಂದು ಸಮೀಕ್ಷಾ ವರದಿಯೇ ಸುಳ್ಳಾಗಿದೆ.
ಹೌದು, ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರಕ್ಕೆ ಮೂರು ಗೆದ್ದುಕೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಪಿ-ಮಾರ್ಕ್ಸ್ ಸಮೀಕ್ಷೆಯಂತೆ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್, ಇನ್ನೆರಡು ಕ್ಷೇತ್ರಗಳಲ್ಲಿ NDA ಅಭ್ಯರ್ಥಿಗಳು ಗೆಲುವು ಸಾಧಿಸುವುದಾಗಿ ತಿಳಿಸಿತ್ತು.
By-election results : ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣಗಳು..
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದು, ಅವರ ಸೋಲಿಗೆ ಕಾರಣಗಳು ಇಲ್ಲಿವೆ..
- ನಿಖಿಲ್‌ಗೆ ಕುಟುಂಬ ರಾಜಕಾರಣದ ಆರೋಪ ಶಾಪವಾಯಿತು.
- CP ಯೋಗೇಶ್ವರ್ ಪಕ್ಷಾಂತರ ಹಿನ್ನೆಲೆ ಕೊನೇ ಕ್ಷಣದಲ್ಲಿ ಪ್ರತಿಷ್ಠೆಯಾಗಿ ನಿಖಿಲ್ ಸ್ಪರ್ಧೆಗಿಳಿದಿದ್ದು & ಹಿಂದೆಯೂ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ 5 ಬಾರಿ ಗೆದ್ದಿದ್ದ CPY ಎದುರು ನಿಖಿಲ್ ವರ್ಚಸ್ಸು ಕಡಿಮೆಯಾಗಿದ್ದು..
- ಚನ್ನಪಟ್ಟಣದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟ ಯೋಜನೆಗಳ ಭರವಸೆ ಕೈ ಹಿಡಿಯಿತು.
By-election results : ಸಿಪಿ ಯೋಗೇಶ್ವರ್ ಜಯದ ಅಂತರ ಎಷ್ಟು?
ರಾಜ್ಯದ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಂಡಿದ್ದು, ಇದನ್ನು ಚುನಾವಣಾ ಆಯೋಗ ಈಗ ಅಧಿಕೃತವಾಗಿ ಘೋಷಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ 25,413 ಮತಗಳಿಂದ ಗೆದ್ದಿದ್ದಾರೆ. ಇನ್ನು ಯಾರ್ಯಾರಿಗೆ ಎಷ್ಟು ಮತ ಸಿಕ್ಕಿದೆ ಎಂಬುವುದನ್ನು ನೋಡುವುದಾದರೆ..
- ಸಿಪಿ ಯೋಗೇಶ್ವರ್ (ಕಾಂಗ್ರೆಸ್) – 1,12,642
- ನಿಖಿಲ್ ಕುಮಾರಸ್ವಾಮಿ (ಎನ್‌ಡಿಎ) – 87,229
- ನಿಂಗರಾಜು (ಪಕ್ಷೇತರ) – 2,352,
- ಜೆ.ಟಿ. ಪ್ರಕಾಶ್ (ಪಕ್ಷೇತರ) – 1,649,
- ನೋಟಾ – 427
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment