ಪ್ಯಾರಿಸ್ : ಭಾರತಕ್ಕೆ ರಫೇಲ್ ವಿಮಾನಗಳನ್ನು ಪೂರೈಸುವ ಫ್ರೆಂಚ್ ಡಸಾಲ್ಟ್ ವಿಮಾನ ತಯಾರಿಕಾ ಕಂಪೆನಿಯ ಬಿಲಿಯನೇರ್, ರಾಜಕಾರಣಿ ಒಲಿವರ್ ಡಸಾಲ್ಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದಾರೆ.
ಉತ್ತರ ಫ್ರಾನ್ಸ್‌ನ ಡೌವಿಲ್ಲೆ ಪ್ರದೇಶದ ಬಳಿ ವಿಮಾನ ಅಪಘಾತಕ್ಕೀಡಾಗಿದ್ದು, ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಡಸಾಲ್ಟ್ ಮೃತಪಟ್ಟಿದ್ದಾರೆ ಎಂದು ಸಂಸದೀಯ ಮತ್ತು ತನಿಖಾ ಮೂಲಗಳು ತಿಳಿಸಿವೆ.
ಡಸಾಲ್ಟ್ ಏವಿಯೇಷನ್, ಫ್ರಾನ್ಸ್‌ನ ವಿಮಾನ ತಯಾರಕಾ ಕಂಪೆನಿಯಾಗಿದ್ದು, ಉದ್ಯಮ ಮತ್ತು ಮಿಲಿಟರಿ ಜೆಟ್‌ಗಳನ್ನು ತಯಾರಿಸುತ್ತಿದ್ದು, ಭಾರತವು ಸಹ ತನ್ನ 36 ರಫೇಲ್ ಯುದ್ಧ ವಿಮಾನಗಳನ್ನು ಈ ತಯಾರಕಾ ಕಂಪೆನಿಯಿಂದಲೇ ಖರೀದಿಸುತ್ತಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.