ಬೆಂಗಳೂರು: ಜನಾಭಿಪ್ರಾಯ ಕೇಳದೆ ಕೃಷಿ ಮಸೂದೆ ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು, ರೈತಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತ ಪಡಿಸಿದ್ದು, ಕರ್ನಾಟಕ ಬಂದ್ ಮಾಡುವ ಸೂಚನೆ ನೀಡಿದ್ದಾರೆ.
ಕರ್ನಾಟಕ ಬಂದ್ಗೆ ಸೂಚನೆ ನೀಡಿರುವ ಬಗ್ಗೆ, ಪ್ರಜಕೀಯ ಪಕ್ಷದ ಸ್ಥಾಪಕ, ನಟ, ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಉಪೇಂದ್ರ ಅವರು ಟ್ವೀಟ್ ಮಾಡಿದ್ದೂ,”ಜನಾಭಿಪ್ರಾಯ ಕೇಳದೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಹೋರಾಟ, ಬಂದ್, ಮಾಡಲು ಹೊರಟಿದ್ದಾರೆ.
ಇದರ ಬದಲು “ಜನಾಭಿಪ್ರಾಯವೇ ಅಂತಿಮ” ಎನ್ನುವ ಪ್ರಣಾಳಿಕೆ ತನ್ನಿ, ನನ್ನ ಮತ ನಿಮಗೆ ಎಂದು ಚುನಾವಣೆಯ ಸಮಯದಲ್ಲಿ ಜನ ಹೋರಾಡಿದರೆ ( ನಿರ್ಧಾರ ಮಾಡಿದರೆ ) ಎಲ್ಲ ಸಮಸ್ಯೆಗಳೂ ಬಂದ್ ಆಗುತ್ತದೆ, ಅಲ್ಲವೇ ? ಎಂದು ರಿಯಲ್ ಸ್ಟಾರ್ ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.
ಜನಾಭಿಪ್ರಾಯ ಕೇಳದೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಹೋರಾಟ ! ಬಂದ್ !
“ಜನಾಭಿಪ್ರಾಯವೇ ಅಂತಿಮ” ಎನ್ನುವ ಪ್ರಣಾಳಿಕೆ ತನ್ನಿ ನನ್ನ ಮತ ನಿಮಗೆ ಎಂದು ಚುನಾವಣೆಯ ಸಮಯದಲ್ಲಿ ಜನ ಹೋರಾಡಿದರೆ ( ನಿರ್ಧಾರ ಮಾಡಿದರೆ ) ಎಲ್ಲ ಸಮಸ್ಯೆಗಳೂ ಬಂದ್ ಆಗುತ್ತದೆ, ಅಲ್ಲವೇ ?#upp #prajaakeeya— Upendra (@nimmaupendra) September 23, 2020