ಬೆಂಗಳೂರು: ಸ್ವಯಂ ಸೇವಕ ಸಂಘದ ಬಗ್ಗೆ ಗೊತ್ತಿದೆಯಾ? ಮೊದಲು ದೊಣ್ಣೆ ಹಿಡಿದು, ಚಡ್ಡಿ ಧರಿಸಿ ಬರುತ್ತಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರ್ ಎಸ್ಎಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯವರು ಪಕೋಡ ಮಾಡಿ ಎನ್ನುತ್ತಾರೆ. ಸದ್ಯ ಎಣ್ಣೆ ಬೆಲೆಯೂ ಹೆಚ್ಚಳವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ನಿಮ್ಮ ಕಾಲದಲ್ಲಿ ಬೆಲೆ ಹೆಚ್ಚಳ ಆಗಿರಲಿಲ್ಲವೇ ಎನ್ನುತ್ತಾರೆ. ಬಿಜೆಪಿ ಸರ್ಕಾರ ದಾರಿದ್ರ್ಯದ್ದಾಗಿದೆ. ಈ ಸರ್ಕಾರಕ್ಕೆ ಮಾನ, ಮರ್ಯಾದೆ ಇಲ್ಲ. ದಮ್ಮಯ್ಯ ಎನ್ನುತ್ತೇನೆ, ಈ ಸರ್ಕಾರವನ್ನು ಕಿತ್ತುಹಾಕಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೊಮ್ಮಾಯಿ ಸಿಎಂ ಮಾಡಿದ್ದು ಆರ್ ಎಸ್ಎಸ್: ಸಿದ್ದರಾಮಯ್ಯ
ಇನ್ನು, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದು ಸ್ವಯಂ ಸೇವಕ ಸಂಘ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಆರೋಪಿಸಿದ್ದಾರೆ. ಬಿಜೆಪಿಯದ್ದು, ಮುಖವಾಡ, ಆದರೆ ಆರ್ ಎಸ್ಎಸ್ ಡ್ರೈವ್ ಮಾಡುತ್ತಿದೆ. ಸಂಘದವರು ದೇಶ ಭಕ್ತರಲ್ಲ. ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಯಾವೊಬ್ಬ ನಾಯಕನೂ ಸತ್ತಿಲ್ಲ. ಬಿಜೆಪಿಯವರು ದಲಿತರು ಮತ್ತು ಬಡವರ ವಿರೋಧಿಗಳು. ಇವರಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಬಿಜೆಪಿ ನಾಯಕರು ತಾಲಿಬಾನಿಗಳು ಹುಷಾರಾಗಿರಿ ಎಂದು ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.