POP Ganesha: ಗಣೇಶ ಚತುರ್ಥಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ನಡುವೆ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಲಾದ ಗಣೇಶ ವಿಗ್ರಹಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದರೂ, ಕೂಡ ಕೆಲವು ಕಡೆ ಅಕ್ರಮವಾಗಿ ಪಿಒಪಿ ಗಣೇಶ ತಯಾರಿಕೆ ಮತ್ತು ಮಾರಾಟ ಮಾಡಲಾಗುತ್ತಿದೆ. ಕರ್ನಾಟಕದಾದ್ಯಂತ ಪಿಒಪಿ ಗಣೇಶ ವಿಗ್ರಹಗಳು ಬ್ಯಾನ್ ಆಗಿ ಮೂರು ವರ್ಷ ಕಳೆದಿದೆ. ಆದರೆ, ಬ್ಯಾನ್ ಅನ್ನೋದು ಹೆಸರಿಗೆ ಮಾತ್ರ ಎಂಬ ಅನುಮಾನ ಮೂಡಿದೆ.
POP Ganesha: ಪಿಒಪಿ (Plaster of Paris) ವಿಗ್ರಹಗಳ ತಯಾರಿಕೆ ಮಾರಾಟ ನಿಷೇಧ ಯಾಕಾಗಿ?
ಗಣೇಶ ಹಬ್ಬ ಆಚರಣೆಯ ನಂತರ ವಿಗ್ರಹಗಳನ್ನು ನದಿಗೆ ಬಿಡುವುದು ವಾಡಿಕೆ. ಆದರೆ ನೀರಿನಲ್ಲಿ ಕರಗದ ಪಿಒಪಿ ವಿಗ್ರಹಗಳು ಜಲಮೂಲಗಳಿಗೆ ಅಪಾಯಕಾರಿಯಾಗಿದೆ. ಇಂತಹ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆಯನ್ನು ಸಂಪೂರ್ಣ ತಡೆಯದಿದ್ದರೆ ಮುಂದೊಂದು ದಿನ ಜಲ ಮೂಲಗಳ ಸರ್ವ ನಾಶವಾಗಲಿದೆ.
ಇಂತಹ ಗಣೇಶ ವಿಗ್ರಹಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆ ಮಾಡುವುದರ ವಿರುದ್ಧ ಜಲ, ವಾಯು ಮತ್ತು ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಈಗಾಗಲೇ ಸೂಚಿಸಿದೆ.
POP Ganesha: ಪ್ಲಾಸ್ಟರ್ ಆಫ್ ಪ್ಯಾರೀಸ್‌ನ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಯಾಕಾಗಿ?
ಪ್ಲಾಸ್ಟರ್ ಆಫ್ ಪ್ಯಾರೀಸ್‌ನ ಗಣೇಶ ಮೂರ್ತಿಗಳಿಗೆ ಹೋಲಿಸಿದರೆ ಮಣ್ಣಿನ ಮೂರ್ತಿಗಳಿಗೆ ಬೆಲೆ ಹೆಚ್ಚ. ಮಣ್ಣಿನ ಮೂರ್ತಿ ಮಾಡಲು ಅಧಿಕ ಸಮಯ ಬೇಕು. ಮಣ್ಣಿನ ಮೂರ್ತಿಗಳನ್ನು ಹೆಚ್ಚು ದಿನ ಇಡುವುದು ಕಷ್ಟ ಅವುಗಳು ಬೇಗ ಬಿರುಕು ಬಿಡುತ್ತದೆ ಮತ್ತು ಬೇಗನೆ ಒಣಗುತ್ತವೆ.
ತಯಾರಿಕೆಯ ಪ್ರಕ್ರಿಯೆಯಲ್ಲಿಯೇ, ಸುಮಾರು 60% ರಷ್ಟು ಮಣ್ಣಿನ ವಿಗ್ರಹಗಳು ಹಾನಿಗೊಳಗಾಗುತ್ತವೆ. ಮೂರು ಅಡಿ ಮಣ್ಣಿನ ಗಣೇಶನ ವಿಗ್ರಹವು ಸುಮಾರು 9,000 ರೂ. ಇದೆ. POP ವಿಗ್ರಹಗಳ ನಿರ್ವಹಣೆ ಸುಲಭ, ಕಡಿಮೆ ವೆಚ್ಚದ ಇವುಗಳಿಗೆ ಜನರು ಮಾರುಹೋಗುತ್ತಿದ್ದಾರೆ.
https://vijayaprabha.com/today-petrol-diesel-gold-and-silver-prices/