BIG NEWS: ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಆತಂಕದ ನಡುವೆಯೇ ಇದೀಗ ‘ಯೆಲ್ಲೋ ಫಂಗಸ್’ ಪತ್ತೆ..? ಏನಿದು..? ಇದರ ಲಕ್ಷಣಗಳೇನು..?

ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಆತಂಕದ ನಡುವೆಯೇ ಇದೀಗ “ಯೆಲ್ಲೋ” ಫಂಗಸ್ ಸೋಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿದೆ. ಯೆಲ್ಲೋ ಫಂಗಸ್ ಎನ್ನುವುದು ಫಂಗಸ್ ನ ವರ್ಣ ವ್ಯತ್ಯಾಸವಷ್ಟೆ. ಇವು ದೇಹದ ಬೇರೆ ಬೇರೆ…

ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಆತಂಕದ ನಡುವೆಯೇ ಇದೀಗ “ಯೆಲ್ಲೋ” ಫಂಗಸ್ ಸೋಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿದೆ. ಯೆಲ್ಲೋ ಫಂಗಸ್ ಎನ್ನುವುದು ಫಂಗಸ್ ನ ವರ್ಣ ವ್ಯತ್ಯಾಸವಷ್ಟೆ. ಇವು ದೇಹದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ವರ್ಣದಲ್ಲಿ ಇರುತ್ತವೆ.

ಹಾಗಂತ ಬೇರೊಂದು ಶಿಲೀಂಧ್ರಕ್ಕಿಂತ ಯೆಲ್ಲೋ ಫಂಗಸ್ ಮಾರಕ ಎನ್ನಲಾಗದು. ಶಿಲೀಂಧ್ರಗಳಲ್ಲಿ 3 ಬಗೆ. ಮ್ಯೂಕೊರ್ವೈಕೊಸಿಸ್, ಕ್ಯಾಂಡಿಡಾ, ಆರ್ಸಲೋಸಿಸ್. ಕೋವಿಡ್ ನಂತರ ಕಾಣಿಸುವುದು ಮ್ಯೂಕೊರ್ವೈಕೊಸಿಸ್. ಆರ್ಸಲೋಸಿಸ್ ಶ್ವಾಸಕೋಶದ ಮೇಲೆ ಕಾಣಿಸುವಂತಹದ್ದು ಎನ್ನುತ್ತಾರೆ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ.

ಯೆಲ್ಲೋ ಫಂಗಸ್ ಸೋಂಕಿನ ಲಕ್ಷಣಗಳಿವು;

Vijayaprabha Mobile App free

* ಶಕ್ತಿಯನ್ನು ಕುಗ್ಗಿಸುತ್ತದೆ. ದೇಹದಲ್ಲಿ ತೀವ್ರವಾದ ಆಯಾಸ, ಆಲಸ್ಯ ಮಾಡಬಹುದು.

* ಜೀರ್ಣಕ್ರಿಯೆ ಮೇಲೂ ಪ್ರಭಾವ ಬೀರಬಹುದು. ಹಸಿವು ಕಡಿಮೆಯಾಗುವುದು, ಆಹಾರ ಕ್ರಮದಲ್ಲಿ ಏಕಾಏಕಿ ಬದಲಾವಣೆಯಾಗುತ್ತದೆ.

* ಏಕಾಏಕಿ ದೇಹದ ತೂಕ ಕಡಿಮೆಯಾಗುವುದು ಕೂಡಾ ಇದರ ಒಂದು ಲಕ್ಷಣ.

* ದೃಷ್ಟಿ ದೋಷ, ಕಣ್ಣು ಕೆಂಪು, ಹಳದಿಯಾಗುತ್ತದೆ. ಇದು ಕಣ್ಣಿನೊಳಗೆ ಕೀವು ಕೂಡಾ ಉಂಟು ಮಾಡಬಹುದು.

* ಗಾಯಗಳಿಂದ ಕೀವು ಸೋರುವುದಲ್ಲದೆ, ಗಾಯಗಳು ಗುಣ ಆಗುವುದು ಬಹಳ ನಿಧಾನವಾಗಬಹುದು.

ಯಲ್ಲೋ ಫಂಗಸ್ ರೋಗವನ್ನು ಆಂಪೋಟೆರಿಸಿನ್ ಬಿ ಇಂಜೆಕ್ಷನ್ ಮೂಲಕ ಗುಣಪಡಿಸಬಹುದಾಗಿದೆ. ಆದರೆ ಕೊರೋನಾ ಎರಡನೇ ಅಲೆ ಕಾಣಿಸಿಕೊಂಡ ಸೋಂಕಿತರಲ್ಲಿ ಈ ಫಂಗಸ್ ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಗಾಜಿಯಾಬಾದ್ ನಲ್ಲಿ ಯೆಲ್ಲೋ ಫಂಗಸ್ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿತ್ತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.